ಪತ್ತನಂತಿಟ್ಟ (ಕೇರಳ): ಅಂತ್ಯಸಂಸ್ಕಾರಕ್ಕಾಗಿ ಸೌದಿಯಿಂದ ತಂದ ಮೃತದೇಹ ಬದಲಾದ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೋನ್ನಿ ಕುಮ್ಮಣ್ಣೂರ್ ನಿವಾಸಿ ರಫೀಕ್ (29) ಎಂಬವರು ಸೌದಿ ಅರೇಬಿಯಾದಲ್ಲಿ ಕಳೆದ ಫೆ. 28ರಂದು ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ತವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಂದು ತಲುಪಿದ್ದು ಮಾತ್ರ ಶ್ರೀಲಂಕನ್ ಯುವತಿಯ ಮೃತದೇಹ.ಅಂತ್ಯಸಂಸ್ಕಾರ ನಡೆಸುವ ಸಲುವಾಗಿ ಮೃತದೇಹನ್ನಿಟ್ಟ ಪೆಟ್ಟಿಗೆ ತೆರೆದಾಗ ಮೃತದೇಹ ಬದಲಾದದ್ದು ಗಮನಕ್ಕೆ ಬಂತು. ಬಳಿಕ ಮೃತದೇಹವನ್ನು ಕೋಟ್ಟಯಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು.
Comments are closed.