ರಾಷ್ಟ್ರೀಯ

ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿಗೆ ನೀಡಿಲ್ಲ ಟಿಕೆಟ್ ! ಅಡ್ವಾಣಿಯ ಗಾಂಧಿನಗರ ಕ್ಷೇತ್ರ ಅಮಿತ್ ಶಾ ಹೆಗಲಿಗೆ

Pinterest LinkedIn Tumblr

ನವದೆಹಲಿ: ಲೋಕಸಭೆಗೆ ಸರ್ವ ಸನ್ನದ್ಧವಾಗಿರುವ ಆಡಳಿತಾರೂಢ ಬಿಜೆಪಿ, ಇಂದು ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯ ಪ್ರಮುಖ ತಲೆಗಳಿಗೆಲ್ಲಾ ಒಂದೊಂದು ಕ್ಷೇತ್ರ ಪಕ್ಕಾ ಆಗಿದೆ.

ಆದರೆ ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ ಅವರ ಗಾಂಧಿನಗರ ಕ್ಷೇತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಲಾಗಿದೆ. ಈ ಮೂಲಕ ಉಕ್ಕಿನ ಮನುಷ್ಯ ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಪರೋಕ್ಷ ಸಂದೇಶವನ್ನು ಬಿಜೆಪಿ ರವಾನಿಸಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಅಡ್ವಾಣಿ ಹೆಸರಿಲ್ಲದೇ ಇದ್ದರೂ, ಮುಂಬರುವ ಪಟ್ಟಿಯಲ್ಲಿ ಹಿರಿಯ ನಾಯಕನ ಹೆಸರಿದ್ದರೆ ಅಚ್ಚರಿಪಡಬೇಕಾಗಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಈ ಮಧ್ಯೆ ಅಡ್ವಾಣಿ ಮಧ್ಯಪ್ರದೇಶ ಅಥವಾ ದೆಹಲಿಯಿಂದ ಚುನಾವಣೆಗೆ ನಿಲ್ಲಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪಕ್ಷ ಕಟ್ಟಿ ಬೆಳೆಸಿದ ಹಿರಿಯ ನೇತಾರ ಚುನಾವಣೆ ಸ್ಪರ್ಧಿಸಲಿದ್ದಾರೋ ಇಲ್ಲವೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಅದೆನೆ ಇರಲಿ, ಅಡ್ವಾಣಿ ಈ ಬಾರಿ ಸ್ಪರ್ಧೆ ಮಾಡಿದರೂ ಅಥವಾ ಮಾಡದಿದ್ದರೂ ಹೊಸ ದಾಖಲೆಯೊಂದನ್ನು ಬರೆಯಲಿದ್ದಾರೆ. ಒಂದು ವೇಳೆ ಅಡ್ವಾಣಿ ಚುನಾವಣೆಗೆ ನಿಂತರೆ 91ನೇ ವಯಸ್ಸಿನಲ್ಲಿ ಚುನಾವಣೆ ಎದುರಿಸುತ್ತಿರುವ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಒಂದು ವೇಳೆ ಅಡ್ವಾಣಿ ಚುನಾವಣಾ ಕಣದಿಂದ ಹಿಂದೆ ಸರಿದರೆ 91ನೇ ವಯಸ್ಸಿನಲ್ಲಿ ರಾಜಕಾರಣದಿಂದ ನಿವೃತ್ತಿ ಹೊಂದಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

1991ರಿಂದ ಗುಜರಾತ್ ನ ಗಾಂಧಿನಗರ ಕ್ಷೇತ್ರದಿಂಧ ಸ್ಪರ್ಧೆ ಮಾಡುತ್ತಿರುವ ಅಡ್ವಾಣಿ ಆ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

Comments are closed.