
ನವದೆಹಲಿ: ನಿಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಬೇರೆ ಉದ್ಯೋಗ ಸಿಗದೆ ಕಾವಲುಗಾರನ ಕೆಲಸವನ್ನೇ ಮಾಡಬೇಕು ಎಂಬ ಆಸೆ ನಿಮಗಿದ್ದಲ್ಲಿ, ಬಿಜೆಪಿ ಮತ್ತು ಮೋದಿ ಅವರಿಗೆ ಮತ ಹಾಕಿ. ಇದಕ್ಕೆ ನಮ್ಮ ತಕರಾರು ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವ್ಯಂಗವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ‘ನಾನು ಚೌಕಿಧಾರ’ ಎಂದು ಅರಂಭಿಸಿರುವ ಅಭಿಯಾನಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ, ನಿಮ್ಮ ಮಕ್ಕಳಿಗೆ ಕಾವಲುಗಾರನ ಕೆಲಸ ಬಿಟ್ಟು ಬೇರೆ ಯಾವ ಕೆಲಸ ಸಿಗುವುದಿಲ್ಲ ಎಂದು ನಿಮಗೆ ಖಚಿತವಾದಲ್ಲಿ, ನೀವು ಬಿಜೆಪಿ ಮತ್ತು ಮೋದಿಯವರನ್ನು ಅಪ್ಪಿಕೊಳ್ಳಬಹುದು ಎಂದು ಅವರು ಲೇವಡಿ ಮಾಡಿದ್ದಾರೆ.
ಮೋದಿ ಜಿ ಇಡೀ ದೇಶವನ್ನು ಚೌಕಿದಾರ್ ಮಾಡಲು ಹೊರಟಿದ್ದಾರೆ. ನಿಮ್ಮ ಮಕ್ಕಳನ್ನು ಸಹ ಚೌಕಿದಾರ್ ಮಾಡಲು ಬಯಸಿದರೆ, ಇದು ನಿಮಗೆ ಇಷ್ಟವಾದರೆ ಮೋದಿ ಜಿಗೆ ಮತ ಚಲಾಯಿಸಿ. ‘ಆದರೆ, ನಿಮ್ಮ ಮಕ್ಕಳನ್ನು ವೈದ್ಯರು, ಎಂಜಿನಿಯರ್, ವಕೀಲರನ್ನಾಗಿ ನೋಡಲು, ಉತ್ತಮ ಶಿಕ್ಷಣ ನೀಡಲು ಬಯಸಿದರೆ, ವಿದ್ಯಾವಂತ ಮತ್ತು ಪ್ರಾಮಾಣಿಕ ಜನರ ರಾಜಕೀಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ಮತ ಚಲಾಯಿಸಿ ಎಂದು ಎಂದು ಕೇಜ್ರಿವಾಲ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಇದೆ 16 ರಂದು ಮೋದಿ ಭ್ರಷ್ಟಾಚಾರದ ವಿರುದ್ಧ ದೇಶದ ಜನತೆ ಕಾವಲುಗಾರರಾಗಬೇಕು ಎಂದು ಭಾರತೀಯರನ್ನು ಒತ್ತಾಯಿಸಿ, ‘ಮೇನ್ ಭಿ ಚೌಕಿದಾರ್’ (ನಾನು ಕೂಡ ಕಾವಲುಗಾರನಾಗಿದ್ದೇನೆ) ಎಂಬ ಅಭಿಯಾನ ಆರಂಭಿಸಿದ್ದರು.
Comments are closed.