ರಾಷ್ಟ್ರೀಯ

ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡಿ ವೈರಲ್​ ಮಾಡಿದ ಹುಡುಗ

Pinterest LinkedIn Tumblr

ಹೈದರಾಬಾದ್​: ಹದಿನೇಳು ವರ್ಷದ ಹುಡುಗನೊಬ್ಬ ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡಿ ವೈರಲ್​ ಮಾಡಿದ್ದಾನೆ ಎನ್ನಲಾದ ಘಟನೆ ಹೈದರಬಾದಿನಲ್ಲಿ ನಡೆದಿದೆ.

ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಛತ್ರಿನಾಕ ಪೊಲೀಸ್​ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ವಿದ್ಯಾಸಾಗರ್, ಆರೋಪಿಯಾಗಿರುವ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು 28 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸೋಮವಾರ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಬಾತ್​ರೂಮ್​ನಲ್ಲಿ ಮಹಿಳೆ ಸ್ನಾನ ಮಾಡುತ್ತಿರುವಾಗ ನೆರೆಯ ಮನೆಯವನಾದ ಆರೋಪಿ ಹುಡುಗ ತನ್ನ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದಾನೆ. ಬಳಿಕ ತನ್ನ ಸ್ನೇಹಿತರಿಗೆ ಅದನ್ನು ಶೇರ್​ ಮಾಡಿದ್ದಾನೆ ಎಂದು​ ಸಂತ್ರಸ್ತ ಮಹಿಳೆ ದೂರು ನೀಡಿದ್ದಳು. ಮಾರ್ಚ್​ 16ರಂದು ದೂರು ದಾಖಲಾಗಿತ್ತು.

ಆರೋಪಿ ಹುಡುಗನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹುಡುಗ ಹಾಗೂ ಆತನ ಸ್ನೇಹಿತರ ಬಳಿಯಿದ್ದ ವಿಡಿಯೋವನ್ನು ಡಿಲಿಟ್​ ಮಾಡಿಸಲಾಗಿದೆ. ಆದರೆ, ಇಷ್ಟು ಸ್ನೇಹಿತರ ಬಳಿ ವಿಡಿಯೋ ಇರಬಹುದೆಂಬುದರ ಬಗ್ಗೆ ವಿಚಾರಣೆ ನಡೆಯುತ್ತಿರುವುದಾಗಿ ಸರ್ಕಲ್​ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ.

Comments are closed.