ರಾಷ್ಟ್ರೀಯ

AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಸ್ತಿ ಎಷ್ಟಿದೆ ಗೊತ್ತಾ!

Pinterest LinkedIn Tumblr


ಹೈದರಾಬಾದ್: ಹೈದರಾಬಾದ್ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ 13 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

12 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 1.67 ಕೋಟಿ ರೂ.ಗಳ ಚರಾಸ್ತಿ ಹೊಂದಿರುವುದಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅಸಾದುದ್ದೀನ್ ಓವೈಸಿ ಅಫಿಡವಿಟ್ ಸಲ್ಲಿಸಿದ್ದಾರೆ.

ಅಫಿಡವಿಟ್ ಪ್ರಕಾರ, ಅವರು ಯಾವುದೇ ಮೋಟಾರು ವಾಹನ ಹೊಂದಿಲ್ಲ, ಆದರೆ ಒಂದು ಎನ್ಪಿ ಬೋರ್ ಹೊಂದಿದ್ದು, 1 ಲಕ್ಷ ಮೌಲ್ಯದ 22 ಪಿಸ್ತೂಲ್ ಮತ್ತು 1 ಲಕ್ಷ ಮೌಲ್ಯದ 30-60 ರೈಫಲ್ ಹೊಂದಿರುವುದಾಗಿ ಓವೈಸಿ ಘೋಷಿಸಿದ್ದಾರೆ.

ಪ್ರಸ್ತುತ ಅವರು ಕೈಯಲ್ಲಿ 2 ಲಕ್ಷ ರೂ. ನಗದನ್ನು ಹೊಂದಿದ್ದಾರೆ. 2017-18ರ ಅವಧಿಯಲ್ಲಿ ಅವರ ಆದಾಯ 10,01,080 ರೂ. ಇದು 2016-17ರ ಅವಧಿಯಲ್ಲಿ 13,33,250 ರೂ. ಇತ್ತು.

ಅವರ ವಿರುದ್ಧ ಐದು ಅಪರಾಧ ಪ್ರಕರಣಗಳು ಬಾಕಿ ಇವೆ. ಯಾವುದೇ ಪ್ರಕರಣದಲ್ಲಿ ಅವರನ್ನು ಕ್ರಿಮಿನಲ್ ಅಪರಾಧಿ ಎಂದು ಘೋಷಿಸಲಾಗಿಲ್ಲ.

Comments are closed.