ರಾಷ್ಟ್ರೀಯ

ಅಮೆರಿಕ; ‘ವಿಶ್ವದ ಅತ್ಯುತ್ತಮ ಪಿಯಾನೋ ವಾದಕ’ ರಿಯಾಲಿಟಿ ಶೋ ಗೆದ್ದ ಚೆನ್ನೈನ 13 ವರ್ಷದ ಪೋರ

Pinterest LinkedIn Tumblr

ಚೆನ್ನೈ: 13 ವರ್ಷದ ಪೋರ ಲಿಡಿಯನ್ ನದಾಸ್ವರಾಮ್ ಅಮೆರಿಕಾದ ರಿಯಾಲಿಟಿ ಶೋವೊಂದರಲ್ಲಿ ವಿಜೇತನಾಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾನೆ. ವಿಶ್ವದ ಅತ್ಯುತ್ತಮ ಪಿಯಾನೋ ವಾದಕ ರಿಯಾಲಿಟಿ ಶೋ ನಲ್ಲಿ ಈತ ಗೆಲುವು ಸಾಧಿಸಿದ್ದು, 1 ಮಿಲಿಯನ್ ಅಂದರೆ 6.9 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾನೆ.

ಜೇಮ್ಸ್ ಕಾರ್ಡೇನ್ ಈ ಶೋ ಆಯೋಜಿಸಿದ್ದರು.ಫೇತ್ ಹಿಲ್, ರುಪಾಲ್ ಚಾರ್ಲ್ಸ್ ಮತ್ತು ಡ್ರೂ ಬ್ಯಾರಿಮೋರ್ ಮುಖ್ಯ ತೀರ್ಪುಗಾರರಾಗಿದ್ದರೆ, ಇನ್ನಿತರ 50 ಮಂದಿ ಜಡ್ಜ್ ಗಳು ನದಾಸ್ವರಾಮ್ ಗೆಲುವಿಗೆ ನೆರವು ನೀಡಿದ್ದಾರೆ.

ಅಂತಿಮ ಪಂದ್ಯದಲ್ಲಿ ಎರಡು ಪಿಯಾನೋ ಮೆಡ್ಲೀಸ್ ಗಳನ್ನು ನುಡಿಸಿದ ನದಾಸ್ವರಾಮ್ 84 ಅಂಕ ಪಡೆದುಕೊಂಡಿದ್ದ. ದಕ್ಷಿಣ ಕೊರಿಯಾದ ಕುಕ್ಕಿವೊನ್ ಗ್ರೂಪ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

ಅಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಸ್ಥಾಪಿರುವ ಚೆನ್ನೈನ ಕೆಎಂ ಸಂಗೀತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನದಾಸ್ವರಾಮ್ , ಸಂಗೀತ ನಿರ್ದೇಶಕ ಗುರು ವರ್ಷನ್ ಸತೀಶ್ ಜೊತೆಗೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಲಿಡಿಯಾನ್ ಯಶಸ್ಸು ಭಾರತದ ಯಶಸ್ಸು ಆಗಿದೆ. ಇದು ನಮ್ಮ ಜೀವನಕ್ಕೆ ಭರವಸೆ, ಪ್ರೀತಿ ಮತ್ತು ಸಂತೋಷವನ್ನು ತಂದಿದೆ ಎಂದು ಎಆರ್ ರೆಹಮಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಹೇಳಿಕೊಂಡಿದ್ದಾರೆ.

Comments are closed.