ರಾಷ್ಟ್ರೀಯ

ಪ್ರಥಮ ರಾತ್ರಿಯಂದು ಗಂಡ ಮತ್ತವನ ತಮ್ಮನಿಂದ ಸಾಮೂಹಿಕ ಅತ್ಯಾಚಾರ!

Pinterest LinkedIn Tumblr


ಮುಜಪ್ಫರ್‌ನಗರ: ಆಕೆಯ ಪಾಲಿಗೆ ಮಧುರವಾಗಬೇಕಿದ್ದ ಮೊದಲ ರಾತ್ರಿ ಬದುಕನ್ನೇ ಹಿಂಡಿಹಿಪ್ಪೆ ಮಾಡಿದ ಕರಾಳ ದಿನವಾಯಿತು. ಬದುಕೀಡಿ ಜತೆಯಾಗಿ ಹೆಜ್ಜೆ ಇಡುವೆ ಎಂದು ಸಪ್ತಪದಿ ತುಳಿದಿದ್ದ ಪತಿ ತನ್ನ ಸಹೋದರನೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ.

ಮುಜಪ್ಫರ್‌ನಗರದ ಹೊರವಲಯದಲ್ಲಿ ಬರುವ ಹಳ್ಳಿಯೊಂದರಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, 26 ವರ್ಷದ ಪೀಡಿತಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಘಾತಕ್ಕೊಳಗಾಗಿರುವ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಮಾರ್ಚ್ 6 ರಂದು ನಡೆದ ಈ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಗಳಿಬ್ಬರು ಕುಡಿದ ಮತ್ತಿನಲ್ಲಿ ಈ ಕೃತ್ಯವನ್ನೆಸಗಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಮನೆಯವರು ಧನದಾಹಿಗಳಾಗಿದ್ದು ವರದಕ್ಷಿಣೆ ತೆಗೆದುಕೊಂಡಿದ್ದರು. ನನ್ನ ಸಹೋದರಿ ಮದುವೆಗೆ ಒಟ್ಟು 7 ಲಕ್ಷ ಖರ್ಚು ಮಾಡಿದೆ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾನೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಆರಂಭಿಸಿದ್ದಾರೆ.

ಜಹಾಂಗೀರ್‌ಬಾಗ್‌ನಲ್ಲಿ ಅಪ್ರಾಪ್ತೆಯಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬಂದಿರುವ ಈ ಸುದ್ದಿ ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದೆ.

Comments are closed.