ರಾಷ್ಟ್ರೀಯ

ಪ್ರಧಾನಿ ಆಸೆ ನನಗಿಲ್ಲ, ರಾಷ್ಟ್ರದ ಅಭಿವೃದ್ಧಿಯೇ ಮೊದಲ ಆಯ್ಕೆ: ಗಡ್ಕರಿ

Pinterest LinkedIn Tumblr


11ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬದಲಾಗಿ ನಿತಿನ್ ಗಡ್ಕರಿ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಯ ಬಗ್ಗೆ ಸದ್ಯ ಸ್ವತಃ ಗಡ್ಕರಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿಯಾವುವ ಯಾವುದೇ ಆಸೆ ನನಗೆ ಇಲ್ಲ. ನನ್ನ ಮನಸ್ಸಿನಲ್ಲಿ ಹಾಗೂ ಆರ್ ಎಸ್‍ಎಸ್ ನಲ್ಲೂ ಇಂತಹ ಯಾವುದೇ ಚಿಂತನೆ ಇಲ್ಲ. ನಮಗೆ ರಾಷ್ಟ್ರದ ಅಭಿವೃದ್ಧಿಯೇ ಮೊದಲ ಆಯ್ಕೆ ಆಗಿದೆ ಎಂದಿದ್ದಾರೆ.

ಪ್ರಧಾನಿ ಆಗಬೇಕೆಂದು ನಾನು ಕನಸು ಕೂಡ ಕಂಡಿಲ್ಲ. ಅಲ್ಲದೇ ಯಾರ ಬಳಿಯೂ ಲಾಬಿ ಮಾಡಲು ಕೂಡ ಹೋಗಿಲ್ಲ. ಪ್ರಧಾನಿಯ ಪಟ್ಟದ ರೇಸ್‍ನಲ್ಲಿ ಇಲ್ಲ. ಇದನ್ನು ನನ್ನ ಹೃದಯದಿಂದ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ನಾನು ಮತ್ತು ನನ್ನ ಪಕ್ಷ ಮೋದಿ ಜೀ ಅವರ ಬೆನ್ನಿಗೆ ನಿಂತು ಅವರ ಉತ್ತಮ ಕಾರ್ಯಗಳನ್ನು ಬೆಂಬಲಿಸುತ್ತೇವೆ. ನಾನು ಯಾವುದೇ ಲೆಕ್ಕಾಚಾರಗಳನ್ನು ಮಾಡಿಲ್ಲ. ಅಲ್ಲದೇ ಯಾವುದೇ ಟಾರ್ಗೆಟ್ ಕೂಡ ಇಟ್ಟುಕೊಂಡಿಲ್ಲ. ನಾನು ನಾನು ನಂಬಿದ ದಾರಿ ಎಲ್ಲಿ ಕರೆದ್ಯೊಯುತ್ತದೆ ಅಲ್ಲಿಗೆ ಸಾಗುತ್ತೇನೆ. ನನಗೆ ನೀಡಿದ ಜವಾಬ್ದಾರಿಗಳನ್ನು ಮಾತ್ರ ನಿರ್ವಹಿಸುತ್ತೇನೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕತ್ವದ ಕುರಿತು ಮಾಡಿದ ಟೀಕೆಗಳ ಬೆನ್ನಲ್ಲೇ ಗಡ್ಕರಿ ಈ ಸ್ಪಷ್ಟನೆಯನ್ನು ನೀಡಿದ್ದಾರೆ. ಗಣರಾಜೋತ್ಸವ ದಿನದಂದು ನಿತಿನ್ ಗಡ್ಕರಿ ಹಾಗು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಕದಲ್ಲೇ ಕುಳಿತು ಮಾತುಕತೆ ನಡೆಸಿದ್ದರು. ಅಲ್ಲದೇ ಸಂಸತ್ ಅಧಿವೇಶನದ ಸಮಯದಲ್ಲೂ ಸಚಿವರಾಗಿ ಗಡ್ಕರಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೇಜುಕುಟ್ಟಿ ಸ್ವಾಗತಿಸಿದ್ದರು.

Comments are closed.