ರಾಷ್ಟ್ರೀಯ

ಪ್ರಧಾನಿ ಮೋದಿ ನೋಡಲು ಉಗ್ರಗಾಮಿಯಂತೆ ಕಾಣುತ್ತಾರೆ: ಕಾಂಗ್ರೆಸ್ ನಾಯಕಿ ವಿಜಯಶಾಂತಿ

Pinterest LinkedIn Tumblr

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ.. ಅವರ ಆಡಳಿತದಲ್ಲಿ ಜನ ಹೆದರಿಕೆಯಲ್ಲಿ ಬದುಕುತ್ತಿದ್ದಾರೆ.. ಅವರನ್ನು ನೋಡಿದರೆ ಉಗ್ರಗಾಮಿಯಂತೆ ಕಾಣಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ವಿಜಯ್ ಶಾಂತಿ ಹೇಳಿದ್ದಾರೆ.

ತೆಲಂಗಾಣದ ಶಂಶಾಬಾದ್​ನಲ್ಲಿ ಇಂದು ಸಂಜೆ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿಯವರಿಗಿಂತ ಮುಂಚೆ ಮಾತನಾಡಿದ ವಿಜಯಶಾಂತಿ ಈ ರೀತಿಯ ವಿವಾದಕ್ಕೀಡಾಗುವ ಹೇಳಿಕೆಯನ್ನು ನೀಡಿದ್ದಾರೆ.

‘ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ, ಜನ ಹೆದರಿಕೆಯಲ್ಲಿ ಬದುಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವಾಗ ಬಾಂಬ್​ ಸ್ಫೋಟ ಮಾಡುತ್ತಾರೆ ಎಂಬ ಭಯದಲ್ಲಿ ಎಲ್ಲರೂ ಇರುವಂತಾಗಿದೆ. ಮೋದಿ ನೋಡಲು ಉಗ್ರಗಾಮಿಯಂತೆ ಕಾಣಿಸುತ್ತಾರೆ. ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ. ದೇಶದ ಪ್ರಧಾನಿ ಈ ರೀತಿ ಇರುವುದು ಸರಿಯಲ್ಲ ಎಂದು ಹೇಳುವ ಮೂಲಕ ವಿಜಯ ಶಾಂತಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನು ವಿಜಯ್ ಶಾಂತಿ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ವಿಜಯಶಾಂತಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

Comments are closed.