ರಾಷ್ಟ್ರೀಯ

ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ ಬಜಾಜ್ KTM ಬೈಕ್!

Pinterest LinkedIn Tumblr


ನವದೆಹಲಿ: ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಈಗಾಗಲೇ ಜಾವಾ ಮೋಟಾರ್ ಬೈಕ್ ಪೈಪೋಟಿ ನೀಡುತ್ತಿದೆ. ಇದೀಗ ಬಜಾಜ್ KTM ಪೈಪೋಟಿ ನೀಡಲು ಸಜ್ಜಾಗಿದೆ. ಬಜಾಜ್ KTM ಟ್ವಿನ್ ಸಿಲಿಂಡರ್ ಎಂಜಿನ್ ಬೈಕ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ GT 650 ಹಾಗೂ ಇಂಟರ್‌ಸೆಪ್ಟರ್ 650 ಬೈಕ್‌ಗೆ ಪೈಪೋಟಿ ನೀಡಲಿದೆ.

ಕಳೆದ ವರ್ಷ ರಾಯಲ್‌ ಎನ್‌ಫೀಲ್ಡ್ ಟ್ವಿನ್ ಸಿಲಿಂಡರ್ ಬೈಕ್‌ಗಳಾದ ಕಾಂಟಿನೆಂಟಲ್ GT 650 ಹಾಗೂ ಇಂಟರ್‌ಸೆಪ್ಟರ್ 650 ಬಿಡುಗಡೆ ಮಾಡಿದೆ. ಇದು ಯಶಸ್ಸು ಕಂಡಿದೆ. ಟ್ವಿನ್ ಸಿಲಿಂಡರ್ ಬೈಕ್ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಬಜಾಜ್ KTM ಕೂಡ ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ.

KTM ಹಾಗೂ ಬಜಾಜ್ ಸಹಯೋಗದಲ್ಲಿ 500cc ಟ್ವಿನ್ ಸಿಲಿಂಡರ್ ಬೈಕ್ ಬಿಡುಗಡೆಯಾಗಲಿದೆ. KTM ಬೈಕ್ ಇದಾಗಿದ್ದು, ಬಜಾಜ್ ಬೈಕ್ ಘಟಕದಲ್ಲಿ ಈ ಬೈಕ್ ಉತ್ಪಾದನೆಯಾಗಲಿದೆ. ಇಷ್ಟೇ ಅಲ್ಲ ವಿದೇಶಗಳಿಗೂ ಭಾರತದಿಂದಲೇ ರಫ್ತಾಗಲಿದೆ. ಭಾರತದಲ್ಲಿ KTM ಬೈಕ್ ಹೆಚ್ಚು ಪ್ರಸಿದ್ಧಿಯಾಗಿದೆ. Duke 125, Duke 200, Duke 250, Duke 390 ಬೈಕ್ ಯುವ ಜನತೆಯನ್ನು ಆಕರ್ಷಿಸಿದೆ. ಇದೀಗ ಟ್ವಿನ್ ಸಿಲಿಂಡರ್ 500 ಸಿಸಿ ಬೈಕ್ ಕೂಡ ಹೊಸ ಸಂಚಲನ ಮೂಡಿಸಲಿದೆ ಎಂದು ಕಂಪನಿ ಹೇಳಿದೆ.

Comments are closed.