ರಾಷ್ಟ್ರೀಯ

ಮಗುವಿಗೆ ಅಭಿನಂದನ್ ವರ್ತಮಾನ್ ಹೆಸರಿಟ್ಟ ದಂಪತಿ

Pinterest LinkedIn Tumblr


ನವದೆಹಲಿ: ಇತ್ತ ಶುಕ್ರವಾರ ಸಂಜೆ ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಾಮಾನ್ ಅವರನ್ನು ಪಾಕಿಸ್ತಾನ ಬಿಡುಗಡೆಗೊಳಿಸುತ್ತಿದ್ದರೆ, ಇನ್ನೊಂದೆಡೆಗೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ತಮ್ಮ ಮಗುವಿಗೆ ಅಭಿನಂದನ್ ವರ್ತಾಮಾನ್ ಹೆಸರನ್ನು ನಾಮಕರಣ ಮಾಡಲಾಗಿದೆ.

ನನ್ನ ಸೊಸೆ ಮಗುವಿಗೆ ಜನ್ಮ ನೀಡಿದ್ದಾಳೆ. ನಾವು ಐಎಎಫ್ ಪೈಲಟ್ ಗೌರವಾರ್ಥವಾಗಿ ಅವನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ್ದೇವೆ . ನಮಗೆ ಪೈಲಟ್ ಬಗ್ಗೆ ಹೆಮ್ಮೆ ಇದೆ.ಆದ್ದರಿಂದಲೇ ಮತ್ತು ನಾವು ಮಗುವಿಗೆ ಅಭಿನಂದನ್ ಎಂದು ಹೆಸರಿಸಿವೆ “ಎಂದು ಮಗುವಿನ ಅಜ್ಜ ಜನೇಶ್ ಭೂತಾನಿ ಸುದ್ದಿಗಾರರಿಗೆ ತಿಳಿಸಿದರು.

ಟಿವಿ ಚಾನೆಲ್ ಗಳನ್ನು ನೋಡುತ್ತಿದ್ದ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಗೆ ಸಂಬಂಧಿಸಿದ ಬೆಳವಣಿಗೆಗಳನ್ನು ನೋಡಿ ಈ ಹೆಸರು ಇಟ್ಟಿರುವುದಾಗಿ ಹೇಳಿದರು.ಇದೇ ವೇಳೆ ಮಾತನಾಡಿದ ನವಜಾತ ಶಿಶುವಿನ ತಾಯಿ ಸಪ್ನಾದೇವಿ “ನನ್ನ ಮಗನನ್ನು ಅಭಿನಂದನ್ ಎಂದು ಹೆಸರಿಸುವ ಮೂಲಕ, ಪೈಲಟ್ ನ ಶೌರ್ಯದ ಬಗ್ಗೆ ನಾವು ನೆನಪಿಸಿಕೊಳ್ಳುತ್ತೇವೆ ಮತ್ತು ಅವನು ಬೆಳೆದು ದೊಡ್ಡವನಾದಾಗ ಕೆಚ್ಚೆದೆಯ ಸೈನಿಕನಾಗಿರಲು ನಾನು ಬಯಸುತ್ತೇನೆ”ಎಂದರು.

ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್-21 ವಿಮಾನ ಪತನವಾದ ನಂತರ ಪಾಕಿಸ್ತಾನದ ವಶವಾಗಿದ್ದರು.ನಂತರ ಅವರ ಬಿಡುಗಡೆಗೆ ಹೆಚ್ಚಿದ ಒತ್ತಡದಿಂದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶಾಂತಿಯ ಪ್ರತೀಕವಾಗಿ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.ಅದರ ಪ್ರಕಾರ ಅವರನ್ನು ಪಾಕ್ ಭಾರತಕ್ಕೆ ಹಿಂತಿರುಗಿಸಿತ್ತು.

Comments are closed.