ರಾಷ್ಟ್ರೀಯ

ಪುಲ್ವಾಮಾ ದಾಳಿಯಲ್ಲಿ ಜೈಷೆ ಕೈವಾಡ: ಸಾಕ್ಷ್ಯ ನೀಡಿದ ಭಾರತ

Pinterest LinkedIn Tumblr


ಹೊಸದಿಲ್ಲಿ: ಫೆ.14ರಂದು ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ತನ್ನ ಕೈವಾಡದ ಬಗ್ಗೆ ಸಾಕ್ಷ್ಯಾಧಾರ ಕೇಳುತ್ತಿದ್ದ ಪಾಕಿಸ್ತಾನ ಈಗ ಇಕ್ಕಟ್ಟಿಗೆ ಸಿಲುಕಿದೆ.

ಈ ದಾಳಿಯಲ್ಲಿ ಪಾಕ್‌ ಮೂಲದ ಜೈಷೆ ಉಗ್ರ ಸಂಘಟನೆ ಸಂಚಿನ ಕುರಿತಾಗಿ ಭಾರತ ಖಚಿತ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ದಿಲ್ಲಿಯಲ್ಲಿರುವ ಪಾಕ್‌ ರಾಯಭಾರಿಯನ್ನು ಕರೆಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಸಾಕ್ಷ್ಯಾಧಾರಗಳನ್ನು ಹಸ್ತಾಂತರಿಸಿದೆ.

ಜತೆಗೆ ”ದಾಳಿಯಲ್ಲಿ ಜೈಷೆ ಕೈವಾಡ, ಜೈಷೆ ಉಗ್ರರ ಕ್ಯಾಂಪ್‌ಗಳ ಅಸ್ತಿತ್ವದ ಬಗ್ಗೆ ಬಲವಾದ ಆಧಾರಗಳನ್ನು ಒದಗಿಸಿದ್ದೇವೆ. ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಜರುಗಿಸಲಿದೆ ಎಂದು ಅಪೇಕ್ಷಿಸುತ್ತಿದ್ದೇವೆ,” ಎಂದು ಸಚಿವಾಲಯ ಪಾಕ್‌ ಅಧಿಕಾರಿಗೆ ಖಡಕ್ಕಾಗಿ ಹೇಳಿದೆ.

ಪುಲ್ವಾಮಾ ದಾಳಿಯಲ್ಲಿ ಪಾಕ್‌ ಕೈವಾಡಕ್ಕೆ ಆಧಾರ ಒದಗಿಸಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದರು.

Comments are closed.