ರಾಷ್ಟ್ರೀಯ

ಭಾರತದ ಏರ್ ಸ್ಟ್ರೈಕ್ ಕಾರ್ಯಾಚರಣೆ ಬೆನ್ನಲ್ಲೇ ಹುಟ್ಟಿದ ಮಗುವಿಗೆ ‘ಮಿರಾಜ್ ಸಿಂಗ್’ ಎಂದು ಹೆಸರಿಟ್ಟ ದಂಪತಿ!

Pinterest LinkedIn Tumblr

Couple in Rajasthan name newborn after Miraj fighter Plane

ಜೈಪುರ: ಭಾರತ ವಾಯುಸೇನೆ ಮಂಗಳವಾರ ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಮುನ್ನೂರಕ್ಕೆ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯಲ್ಲಿ ಮಹತ್ವವಾಗಿ ಬಳಕೆಯಾಗಿದ್ದ “ಮಿರಾಜ್-2000” ಯುದ್ಧವಿಮಾನವಾಗಿದ್ದು ಈ ಕಾರ್ಯಾಚರಣೆ ನಡೆದ ಕೆಲವೇ ಗಂಟೆಗಳಲ್ಲಿ ಹುಟ್ಟಿದ `ಮಿರಾಜ್ ಸಿಂಗ್ ರಾಥೋರ್’ ಎಂದು ಹೆಸರಿಉಟ್ಟಿದ್ದಾರೆ.

ರಾಜಸ್ಥಾನದ ನಾಗ್ಪುರ ಜಿಲ್ಲೆಯ ದಾಬ್ದಾ ಗ್ರಾಮದ ನಿವಾಸಿ ಮಹಾವೀರ್ ಸಿಂಗ್ ಹಾಗೂ ಸೋನಮ್ ಸಿಂಗ್ ದಂಪತಿಗಳ ಮಗುವಿಗೆ ಮಿರಾಜ್ ಸಿಂಗ್ ಎಂದು ಹೆಸರಿಡಲಾಗಿದೆ.ವೀ ಮೂಲಕ ವಾಯುಸೇನೆಯ ಕಾರ್ಯಕ್ಕೆ ಸೆಲ್ಯೂಟ್ ಹೇಳಿದ್ದಾರೆ.

ಇನ್ನು ವಿಶೇಷವೆಂದರೆ ಈ ದಂಪತಿಯ ಕುಟುಂಬದ ಅನೇಕರು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್, ಮುಜಾಫರ್ ಬಾದ್ ಹಾಗೂ ಚಕೋಟಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಿರಾಜ್ ಯುದ್ಧ ವಿಮಾನ ಬಳಸಿ ಮುನ್ನೂರಕ್ಕೆ ಹೆಚ್ಚು ಉಗ್ರರ ಸದೆ ಬಡಿಯಲಾಗಿತ್ತು.

ದೆಹಲಿ ಆಟೋಚಾಲಕನಿಂದ ಫ್ರೀ ರೈಡ್!
ಇದೆಲ್ಲದರ ಮಧ್ಯೆ ದೆಹಲಿಯ ಆಟೋ ಚಾಲಕನೊಬ್ಬ ಮಂಗಳವಾರ ನಡೆದ ಏರ್ ಸ್ಟ್ರೈಕ್ ಅನ್ನು ಸಂಭ್ರಮಿಸಿದ್ದು ದಿನಪೂರ್ತಿ ಎಲ್ಲಾ ಪ್ರಯಾಣಿಕರನ್ನು ಉಚಿತವಾಗಿ ಅವರವರ ನೆಲೆಗಳಿಗೆ ತಲುಪಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ನಡೆಸಿದ ಕಾರ್ಯಾಚರಣೆಗೆ ಗೌರವ ಸಲ್ಲಿಸಲು ತಾನು ಈ ಕೆಲಸ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

Comments are closed.