ರಾಷ್ಟ್ರೀಯ

ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ದೇಶ ಎಂದಿಗೂ ತಲೆತಗ್ಗಿಸುವಂತೆ ಮಾಡುವುದಿಲ್ಲ: ಪ್ರಧಾನಿ ಮೋದಿ

Pinterest LinkedIn Tumblr

ಚುರು: ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ದೇಶ ಎಂದಿಗೂ ತಲೆತಗ್ಗಿಸುವಂತೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು, ಫೆ.25 ರಂದು ರಾತ್ರಿ ಭಾರತೀಯ ವಾಯುಪಡೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ತರಬೇತಿ ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ನಡೆಸಿ ಕನಿಷ್ಟ 300 ಉಗ್ರರನ್ನು ಭಸ್ಮ ಮಾಡಿತ್ತು. ಈ ಬೆನ್ನಲ್ಲೇ ಫೆ.26 ರಂದು ರಾಜಸ್ಥಾನದ ಚುರುವಿನಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, 2014 ರಲ್ಲಿ ತಾವು ಚುರುವಿನಲ್ಲೇ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

ದೇಶಕ್ಕಿಂತ ಮಿಗಿಲು ಯಾವುದೂ ಇಲ್ಲ, ದೇಶ ತಲೆತಗ್ಗಿಸಲು ಬಿಡುವುದಿಲ್ಲ ಎಂದು 2014 ರಲ್ಲಿ ಇದೇ ಚುರುವಿನಲ್ಲಿ ನನ್ನ ಮನದಾಳದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ. 2014 ರ ದಿನವನ್ನು ಮತ್ತೆ ನೆನಪಿಸಿಕೊಳ್ಳುತ್ತುದ್ದೇನೆ ದೇಶ ಸುರಕ್ಷಿತವಾದ ಕೈಗಳಲ್ಲಿದೆ ಎಂಬ ಭರವಸೆ ನೀಡುತ್ತೇನೆ. ದೇಶ ತಲೆತಗ್ಗಿಸಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಯೋಧರ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಯೋಧರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕ ಯೋಧರಿಗೆ ಅರ್ಪಣೆ ಮಾಡಿದ್ದೇವೆ, ನಮ್ಮ ಸರ್ಕಾರ ಬಂದ ನಂತರ 20 ಲಕ್ಷಕ್ಕಿಂತ ಹೆಚ್ಚು ಯೋಧರ ಕುಟುಂಬಗಳಿಗೆ ಒಆರ್ ಒಪಿ ಲಾಭ ದೊರೆತಿದೆ ಎಂದು ಮೋದಿ ಹೇಳಿದ್ದಾರೆ.

Comments are closed.