ರಾಷ್ಟ್ರೀಯ

ಪ್ರತಿದಾಳಿಗೆ ಯೋಧರು ಈಗಲೂ ಸಿದ್ಧರಿದ್ದಾರೆ; ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​​! ​

Pinterest LinkedIn Tumblr


ಬೆಂಗಳೂರು: ಪುಲ್ವಾಮ ಉಗ್ರರ ದಾಳಿಯಿಂದ ನಾವು ನೈತಿಕ ಸ್ಥೈರ್ಯ ಕಳೆದುಕೊಂಡಿಲ್ಲ. ನಮ್ಮ ಮೇಲೆ ದಾಳಿ ನಡೆದ ದಿನವೇ ಯೋಧರು ಪ್ರತಿದಾಳಿಗೆ ಸಿದ್ಧರಿದ್ದರು. ಈಗಲೂ ಯೋಧರು ದಾಳಿ ನಡೆಸಲು ತಯಾರಿದ್ದಾರೆ. ಅದಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಕೈಜೋಡಿಸಲಿದ್ದಾರೆ. ಸದ್ಯ ನಿರಂತರವಾಗಿ ಕಾಶ್ಮೀರದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಯುದ್ದಕ್ಕೆ ಸಿದ್ದರಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​​ ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿನ ದಾಳಿ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಹೇಳಲು ಸಾಧ್ಯವಿಲ್ಲ. ಇದು ದೇಶದಲ್ಲಿ ಯಾರು ಕೂಡ ಊಹಿಸದಂತಹ ದುರ್ಘಟನೆ. ಅವರ ವಿರುದ್ಧ ಹೋರಾಡಲು ತಂತ್ರಗಳನ್ನು ಹೆಣೆಯಲಾಗುತ್ತಿದೆ. ಆದರೆ, ಅದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಅದೊಂದು ಗೌಪ್ಯ ವಿಚಾರ ಸಾರ್ವಜನಿಕವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಇನ್ನು ನಮ್ಮದೇ ಆದ ರೀತಿಯಲ್ಲಿ ತಂತ್ರ ಹೆಣೆಯುತ್ತಿದ್ದೇವೆ. ಇಂಥ ಘಟನೆಯಿಂದ ಸೇನೆ ಕಲಿಯಬೇಕಾದ್ದು ಸಾಕಷ್ಟಿದೆ. ಸಮಯ ಬಂದಾಗ ಎಲ್ಲವನ್ನೂ ಮಾಡಿ ತೋರಿಸುತ್ತೇವೆ. ಈ ಹಿಂದೆ ಮುಂಬೈನಲ್ಲೂ ಉಗ್ರರ ದಾಳಿ ನಡೆದಿತ್ತು. ಸಾಕ್ಷಿ ಸಹಿತ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು. ಉಗ್ರರ ಬಗ್ಗೆ ಪಾಕ್​ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಈ ಮೂಲಕ ದಾಳಿ ನಡೆಸಿದ್ದಕ್ಕೇ ಪೂರಕವಾಗಿ ಸಾಕ್ಷಿ ನೀಡಿ ಎಂದಿದ್ದ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್​​ಗೆ ಚಾಟಿ ಬೀಸಿದ್ದಾರೆ.

ನಾಳೆಯಿಂದ ಏರ್​ ಶೋ

ಇನ್ನು ನಾಳೆಯಿಂದ ಯಲಹಂಕದಲ್ಲಿ ಏರ್​​ ಶೋ ಆರಂಭವಾಗಲಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್​​​ ಚಾಲನೆ ನೀಡಲಿದ್ದಾರೆ. ಏರ್​ ಶೋಗೆ ಒಂದು ದಿನ ಮಾತ್ರವೇ ಉಳಿದಿದ್ದು, ಇಂದು ರಿಹರ್ಸಲ್ ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗಿದ ಪರಿಣಾಮ ಭಾರಿ ದುರಂತ ಸಂಭವಿಸಿತು. ಘಟನೆಯಲ್ಲಿ ಓರ್ವ ಪೈಲಟ್‌ನ ದುರ್ಮರಣವಾಗಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸರು ಮೃತಪಟ್ಟ ಪೈಲಟ್‌ರನ್ನು ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಎಂದು ಗುರುತಿಸಿದ್ದಾರೆ. ಇವರು ಸುಖೋಯ್ 30 ಫೈಟರ್ ಜೆಟ್ ಪರಿಣತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಹಾಗೆಯೇ ಗಾಯಗೊಂಡ ಇನ್ನಿಬ್ಬರು ಪೈಲಟ್‌ಗಳಾ ವಿಂಗ್ ಕಮಾಂಡರ್ ವಿಜಯ್ ಶೆಲ್ಕೆ ಹಾಗೂ ಸ್ಕಾಡ್ರನ್ ಲೀಟರ್ ತೇಜೇಶ್ವರ್ ಸಿಂಗ್ ಎಂದು ಗುರುತಿಸಲಾಗಿದೆ.

Comments are closed.