ರಾಷ್ಟ್ರೀಯ

ಸೌದಿ ಆರೇಬಿಯಾ ದೊರೆಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ

Pinterest LinkedIn Tumblr


ನವದೆಹಲಿ: ಸೌದಿ ಅರೆಬಿಯಾದ ರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಒಂದು ದಿನದ ಭೇಟಿಗಾಗಿ ಒಂದು ನವದೆಹಲಿಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಮಾನ್​ ಅವರನ್ನು ಅಪ್ಪುಗೆ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.

ಇಬ್ಬರು ನಾಯಕರ ನಡುವೆ ಭಯೋತ್ಪಾದನೆ ನಿಗ್ರಹ ಮತ್ತು ವಾಣಿಜ್ಯ ವಿಚಾರವಾಗಿ ಮಾತುಕತೆ ನಡೆಯುವ ಸಾಧ್ಯತೆ ಇದೆ. ಪುಲ್ವಾಮ ಉಗ್ರರ ದಾಳಿಯ ಪ್ರಾಯಶ್ಚಿತವಾಗಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸುವ ಕುರಿತು ಸೌದಿ ಅರೇಬಿಯಾ ರಾಜನ ಜೊತೆ ಮಾತುಕತೆ ನಡೆಸಲಿದೆ. ಜಾಗತಿಕ ಶಾಂತಿ ಮತ್ತು ಭದ್ರತೆ ಬಗ್ಗೆ ನೆನ್ನೆ ಇಸ್ಲಾಮಾಬಾದ್​ಗೆ ಭೇಟಿ ನೀಡಿದ್ದ ಸೌದಿ ದೊರೆ ಮಾತನಾಡಿದ್ದರು. ಹಾಗೂ 20 ಬಿಲಿಯನ್​ ಡಾಲರ್​ ಬಂಡವಾಳ ಹೂಡಿಕೆ ಘೋಷಣೆ ಮಾಡಿದ್ದರು.

ದಕ್ಷಿಣ ಏಷಿಯಾ ಪ್ರವಾಸ ಕೈಗೊಂಡಿರುವ ಸೌದಿ ದೊರೆ ಭಾರತಕ್ಕೆ ಬರುವ ಮುನ್ನ ನೆನ್ನೆ ಇಸ್ಲಾಮಾಬಾದ್​ಗೆ ತೆರಳಿದ್ದರು. ಭಾರತದ ಭೇಟಿ ವೇಳೆ ಸೌದಿ ದೊರೆ ಪುಲ್ವಾಮ ದಾಳಿಯನ್ನು ಖಂಡಿಸಲಿದ್ದಾರಾ ಮತ್ತು ಈ ಬಗ್ಗೆ ಪಾಕಿಸ್ತಾನಕ್ಕೆ ಕರೆ ಮಾಡಲಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.

ಸೌದಿ ದೊರೆಯ ಭೇಟಿ ವೇಳೆ ಎರಡು ರಾಷ್ಟ್ರಗಳ ನಡುವೆ ಹೂಡಿಕೆ, ಪ್ರವಾಸೋದ್ಯಮ, ಗೃಹ ಮತ್ತು ಮಾಹಿತಿ ಹಾಗೂ ಪ್ರಸಾರ ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ (ಎಂಒಯು) ಸಹಿ ಆಗುವ ಸಾಧ್ಯತೆ ಇದೆ. ಭಾರತ ಮತ್ತು ಸೌದಿ ಆರೆಬಿಯಾದ ಕಾರ್ಯತಂತ್ರ ನಾಯಕತ್ವ ಸಮಿತಿ ರಚನೆ ಸಚಿವಾಲಯ ಮಟ್ಟದಲ್ಲಿ ಅಂತಿಮಗೊಳ್ಳಲಿದೆ.

Comments are closed.