ರಾಷ್ಟ್ರೀಯ

ಭಾರತದಿಂದ ಪಾಕಿಸ್ತಾನ ಹೈಕಮಿಷನರ್ ಪಲಾಯನ

Pinterest LinkedIn Tumblr


ನವದೆಹಲಿ: ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

ಪಾಕ್ ನೊಂದಿಗೆ ಭಾರತ ದ್ವಿಪಕ್ಷೀಯ ಮಾತುಕತೆಯನ್ನು ಮುರಿದುಕೊಂಡಿದೆ. ಅಷ್ಟೇ ಅಲ್ಲದೇ ಪಾಕ್ ಮೇಲಿನ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಈ ಮೂಲಕ ಪಾಕಿಸ್ತಾನವನ್ನು ಆರ್ಥಿಕ ದಿವಾಳಿತನ ಮಾಡಲು ಪಣತೊಟ್ಟಿದೆ.

ಇನ್ನು ಇಸ್ಲಾಮಾಬಾದ್ ನಲ್ಲಿನ ತನ್ನ ರಾಯಭಾರಿಯನ್ನು ಹಿಂದಿರುಗುವಂತೆ ಭಾರತ ಹೇಳಿತ್ತು. ಇದರ ಬೆನ್ನಲ್ಲೇ ಪಾಕ್, ದೆಹಲಿಯಲ್ಲಿರುವ ತನ್ನ ಹೈಕಮಿಷನರ್ ಅನ್ನು ವಾಪಸ್ ಕರೆಸಿಕೊಂಡಿದೆ.

ದೆಹಲಿಯಲ್ಲಿದ್ದ ಪಾಕಿಸ್ತಾನದ ರಾಯಭಾರಿ ಸೊಹೈಲ್ ಮಹಮೂದ್ ನವದೆಹಲಿಯಿಂದ ಸೋಮವಾರ ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ ಎಂದು ಪಾಕ್ ವಿದೇಶಾಂಗ ಕಛೇರಿಯ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.

ಫೆ.14ರಂದು ಪುಲ್ವಾಮನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿದೆ. ರಾಜತಾಂತ್ರಿಕವಾಗಿ ಪಾಕ್‌ ಜೊತೆಗಿನ ಎಲ್ಲಾ ಮಾತುಕತೆಗಳನ್ನು ಭಾರತ ಸ್ಥಗಿತಗೊಳಿಸಿದೆ. ಸೋಮವಾರ ಭಾರತದಿಂದ ರಾಯಭಾರಿ ವಾಪಸ್ ಕರೆಸಿಕೊಂಡಿರುವ ಪಾಕಿಸ್ತಾನದ ನಡೆ ಕುತೂಹಲ ಮೂಡಿಸಿದೆ.

Comments are closed.