ರಾಷ್ಟ್ರೀಯ

ಮೋದಿಯನ್ನು ಪಾಕ್ ಪ್ರಧಾನಿಗೆ ಹೋಲಿಕೆ ಮಾಡಿದ ಕೇಜ್ರಿವಾಲ್

Pinterest LinkedIn Tumblr


ನವದೆಹಲಿ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕ್ ಪ್ರಧಾನಿಗೆ ಹೋಲಿಸಿದ್ದಾರೆ.

ದೆಹಲಿಯಲ್ಲಿ ಆಂಧ್ರಪ್ರದೇಶದ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿರುವ ಮುಖ್ಯಮಂತ್ರಿ ಎನ್,ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲವ್ಯಕ್ತಪಡಿಸಿ ಪಿಎಂ ಮೋದಿಯನ್ನು ಪಾಕ್ ಪ್ರಧಾನಿಗೆ ಹೋಲಿಕೆ ಮಾಡಿದ್ದಾರೆ.

“ಇದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜೊತೆಗೆ ಸಾವಿರಾರು ಜನರು ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಇಲ್ಲಿ ಪ್ರದರ್ಶನ ಹಮ್ಮಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಇದು ನಿಜಕ್ಕೂ ದೇಶದ ಒಕ್ಕೂಟ ವ್ಯವಸ್ಥೆಗೆ ಇದು ಬಹುದೊಡ್ಡ ಸವಾಲು” ಎಂದು ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ವ್ಯಕ್ತಪಡಿಸಿ ಆಂಧ್ರಪ್ರದೇಶ ಭವನದಲ್ಲಿ ಮಾತನಾಡಿದರು

ಪ್ರಧಾನಿ ಮೋದಿ ಆಂಧ್ರಕ್ಕೆ ಮೂರು ಬಾರಿ ವಿಶೇಷ ಸ್ಥಾನಮಾನದ ಘೋಷಣೆಯನ್ನು ನೀಡಿದ್ದರು.ಅವರು ವಿಶ್ವ ಪ್ರಸಿದ್ದ ಸುಳ್ಳುಗಾರ, ಅವರು ಏನು ಹೇಳಿದ್ದಾರೂ ಅವರೆಲ್ಲ ಅದನ್ನು ಎಂದಿಗೂ ಈಡೇರಿಸುವುದಿಲ್ಲ. ತಾವು ಏನೆಲ್ಲಾ ಹೇಳಿದ್ದೆವು ಅದೆಲ್ಲವೂ ಕೂಡ ಜುಮ್ಲಾ ಎಂದು ಅಮಿತ್ ಷಾ ಕೂಡ ಹೇಳಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.

ಇನ್ನು ಮುಂದುವರೆದು ” ನಾನು ಹೇಳುವುದಿಷ್ಟೇ ಪ್ರಧಾನಿ ಮೋದಿ ಬಿಜೆಪಿಯ ಪಿಎಂ ಅಷ್ಟೇ ಅಲ್ಲ, ಅವರು ಇಡೀ ದೇಶದ ಪ್ರಧಾನಿ ಎಂದು ತಿಳಿಸಿದರು. ಬಿಜೆಪಿಯೇತರ ಪಕ್ಷಗಳನ್ನು ಅವರು ಪಾಕಿಸ್ತಾನದ ಪ್ರಧಾನಿಯ ರೀತಿ ನೋಡುತ್ತಿದ್ದಾರೆ “ಎಂದರು.

Comments are closed.