ರಾಷ್ಟ್ರೀಯ

ರಾಜಕೀಯ ಪಕ್ಷವೊಂದು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಕುಳಿತ ಪೊಲೀಸ್‌ ಆಯುಕ್ತ: ಶಿಸ್ತು ಕ್ರಮ ಜರುಗಿಸಲು ಬಂಗಾಳ ಸರಕಾರಕ್ಕೆ ಗೃಹ ಇಲಾಖೆ ಸೂಚನೆ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ಪಶ್ಚಿಮ ಬಂಗಾಳ ಸರಕಾರ ನಡುವಿನ ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಗೋಚರವಾಗುತ್ತಿವೆ.

ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಸಿಬಿಐ ವಿಚಾರಣೆಗೆ ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಮತ್ತೊಂದು ಸೂಚನೆ ರವಾನಿಸಿದೆ.

ರಾಜಕೀಯ ಪಕ್ಷವೊಂದು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ರಾಜೀವ್‌ ಕುಮಾರ್ ಮತ್ತು ಇತರ ಪೊಲೀಸರು ಕೂತಿದ್ದು ಕಾನೂನು ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಮಮತಾ ಬ್ಯಾನರ್ಜಿ ನಡೆಸುತ್ತಿದ್ದ ಪ್ರತಿಭನೆಯಲ್ಲಿ ರಾಜೀವ್‌ ಮತ್ತು ಮತ್ತಿತರ ಎಐಎಸ್‌ ಕಾಯಿದೆ ಉಲ್ಲಂಘನೆ ಮಾಡಿರುವ ಕುರಿತು ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರಕಾರಕ್ಕೆ ಪತ್ರ ಬರೆದಿದೆ.

ಪೊಲೀಸ್ ಅಧಿಕಾರಿಗಳ ಈ ವರ್ತನೆ ಶಿಸ್ತು ಕ್ರಮ ಉಲ್ಲಂಘನೆ ಮತ್ತು ಕರ್ತವ್ಯದ ಕಾನೂನು ನಿಯಮಗಳನ್ನು ಗಾಳಿಗೆ ತೂರಿದಂತಿದೆ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಸರಕಾರಕ್ಕೆ ಸೂಚನೆ ಖಡಕ್‌ ಸೂಚನೆ ನೀಡಿದೆ.

Comments are closed.