ರಾಷ್ಟ್ರೀಯ

ಅಮೆರಿಕದಿಂದ ಅತ್ಯಾಧುನಿಕ 72 ಸಾವಿರ ಅಸ್ಸಾಲ್ಟ್ ರೈಫಲ್ ಖರೀದಿಗೆ ಮುಂದಾದ ಭಾರತ!

Pinterest LinkedIn Tumblr


ನವದೆಹಲಿ: ಅಮೆರಿಕದಿಂದ 72,400 ಅತ್ಯಾಧುನಿಕ ಅಸ್ಸಾಲ್ಟ್ ರೈಫಲ್ ಹಾಗೂ ಯುಎಇಯಿಂದ 93,895 ಸಿಕ್ಯೂಬಿ ಕಾರ್ಬೈನ್ ರೈಫಲ್​ಗಳನ್ನ ಕೊಳ್ಳಲು ಭಾರತ ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ಇಲ್ಲದೆ ಸರಕಾರಗಳ ಮಧ್ಯೆ ನಡೆಯುತ್ತಿರುವ ಒಪ್ಪಂದ ಇದಾಗಿರುವುದರಿಂದ ಈ ಶಕ್ತಿಶಾಲಿ ರೈಫಲ್​ಗಳು ಶೀಘ್ರದಲ್ಲೇ ಸೇನೆಗೆ ಸೇರ್ಪಡೆಯಾಗಲಿವೆ. ಒಂದು ಅಂದಾಜಿನಂತೆ ಒಂದು ವರ್ಷದೊಳಗೆ ಅಷ್ಟೂ ರೈಫಲ್​ಗಳು ತಯಾರಾಗಿ ಭಾರತಕ್ಕೆ ಡೆಲಿವರಿ ಆಗಲಿವೆ. ತಿಂಗಳುಗಟ್ಟಲೆ ಯುದ್ಧ ಮಾಡಲು ಭಾರತಕ್ಕೆ ಸಾಮರ್ಥ್ಯವಿಲ್ಲ, ಸಾಮಗ್ರಿಗಳಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಹೊತ್ತಲ್ಲೇ ಈ ಯೋಜನೆ ಹೊರಬಂದಿದೆ.

ಭಾರತದ ಪಾಲಿಗೆ ಬಹಳ ಆಯಕಟ್ಟಿನ ಜಾಗವೆನಿಸಿರುವ ಪಾಕಿಸ್ತಾನ ಮತ್ತು ಚೀನಾದ ಗಡಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗಾಗಿ ಈ ರೈಫಲ್​ಗಳ ಖರೀದಿ ಮಾಡಲಾಗುತ್ತಿದೆ. 7.62 ಎಂಎಂ ಅಸ್ಸಾಲ್ಟ್ ರೈಫಲ್​ಗಳನ್ನು ಅಮೆರಿಕದ ಸಿಐಜಿ ಸಾಯರ್ ಎಂಬ ಸಂಸದ್ಥೆಯು ತಯಾರಿಸಿಕೊಡಲಿದೆ. ಇದಕ್ಕೆ 700 ಕೋಟಿ ರೂ ವೆಚ್ಚವಾಗಲಿದೆ. ಇನ್ನು, 93,895 ಸಿಕ್ಯೂಬಿ ಕಾರ್ಬೈನ್ ರೈಫಲ್​ಗಳ ತಯಾರಿಕೆಯನ್ನು ಯುಎಇ ದೇಶದ ಕಾರಾಕಾಲ್(Caracal) ಎಂಬ ಸಂಸ್ಥೆಯು ಮಾಡಲಿದೆ.

ಭಾರತೀಯ ಸೇನೆಯಲ್ಲಿ 13 ಲಕ್ಷ ಸೈನಿಕರಿದ್ಧಾರೆ. ಅಷ್ಟೂ ಯೋಧರಿಗೂ ಇಂಥ ಅತ್ಯಾಧುನಿಕ ರೈಫಲ್​ಗಳನ್ನು ಕೊಡಬೇಕೆಂಬ ಮಹತ್ವಾಕಾಂಕ್ಷಿ ಕೋರಿಕೆ ಇದೆ. 8.16 ಲಕ್ಷ ಯೋಧರಿಗೆ ರೈಫಲ್​ಗಳನ್ನ ಒದಗಿಸಲು ನಿರ್ಧರಿಸಲಾಗಿದೆ. ಆದರೆ ಅಷ್ಟು ಪ್ರಮಾಣದ ಅತ್ಯಾಧುನಿಕ ರೈಫಲ್​ಗಳ ಖರೀದಿಗೆ ಬಜೆಟ್​ನಲ್ಲಿ ಅವಕಾಶ ಇಲ್ಲವಾದ್ದರಿಂದ 72,400 ಅಸ್ಸಾಲ್ಟ್ ರೈಫಲ್​ಗಳನ್ನ ಆಮದು ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ. ಇನ್ನುಳಿದ ರೈಫಲ್​ಗಳನ್ನು ಮೇಡ್ ಇನ್ ಇಂಡಿಯಾ ಯೋಜನೆಯಂತೆ ದೇಶೀಯವಾಗಿಯೇ ತಯಾರಿಸುವುದು ಸರಕಾರದ ಉದ್ದೇಶವಾಗಿದೆ.

ಗಡಿಭಾಗದಲ್ಲಿ ಶತ್ತುಗಳೊಂದಿಗೆ ಮೊದಲು ಇದಿರಾಗುವ ಫ್ರಂಟ್​ಲೈನ್ ಸೈನಿಕರಿಗೆ ಆಮದು ರೈಫಲ್​ಗಳನ್ನು ನೀಡಲಾಗುತ್ತದೆ.

Comments are closed.