ರಾಷ್ಟ್ರೀಯ

ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ಅವರಿಗೆ ಮತದಾನದ ಹಕ್ಕು ನಿರಾಕರಿಸಬೇಕು: ರಾಮ್‌ದೇವ್

Pinterest LinkedIn Tumblr


ಆಗ್ರಾ: ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ಅವರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಮತ್ತು ಸರಕಾರಿ ಉದ್ಯೋಗ ನೀಡಬಾರದು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಅಲಿಘಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ ಬಾಬಾ ರಾಮ್‌ದೇವ್, ಜನಸಂಖ್ಯೆ ನಿಯಂತ್ರಿಸಲು ಸರಕಾರ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಯಾರು ಹೊಂದಿರುತ್ತಾರೆಯೋ, ಅವರಿಗೆ ಮತದಾನದ ಹಕ್ಕು ನೀಡಬಾರದು. ಹಾಗೆಯೇ ಸರಕಾರಿ ಉದ್ಯೋಗ ನಿರಾಕರಿಸಬೇಕು ಎಂದಿದ್ದಾರೆ.

ಜತೆಗೆ ಸರಕಾರಿ ಆಸ್ಪತ್ರೆ, ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಬಾರದು. ಜತೆಗೆ ಸರಕಾರದ ಯಾವುದೇ ಸೌಲಭ್ಯ ದೊರಕಬಾರದು. ಅದರಲ್ಲಿ ಹಿಂದು ಮುಸ್ಲಿಂ, ಬಡವ ಅಥವಾ ಶ್ರೀಮಂತ ಎಂಬ ಬೇಧವಿಲ್ಲದೆಯೇ, ಎಲ್ಲಿರಿಗೂ ಸಮಾನವಾಗಿ ಅನ್ವಯವಾಗುವಂತೆ ಕಾರ್ಯಕ್ರಮ ರೂಪಿಸಬೇಕು ಎಂದಿದ್ದಾರೆ.

ಜನಸಂಖ್ಯಾ ಬೆಳವಣಿಗೆ ದೇಶದಲ್ಲಿ ಸಮಸ್ಯೆಯಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಬಾಬಾ ರಾಮ್‌ದೇವ್ ಈ ಹಿಂದೆ ಕೂಡ ಸರಕಾರಕ್ಕೆ ಕೆಲವೊಂದು ಸಲಹೆ ನೀಡಿದ್ದರು.

Comments are closed.