ರಾಷ್ಟ್ರೀಯ

ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ; ಸೈಬರ್​ ತಜ್ಞರ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಚುನಾವಣೆಗೆ ಬಳಕೆ ಮಾಡುವ ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​ಗಳನ್ನು (ಇವಿಎಂ) ಸುಲಭವಾಗಿ ಹ್ಯಾಕ್​ ಮಾಡಬಹುದು ಎಂದು ಅಮೆರಿಕ ಮೂಲದ ಸೈಬರ್​ ತಜ್ಞರೊಬ್ಬರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.

ಸೈಯದ್​ ಸೂಜಾ ಎಂಬುವವರು ಈ ಆರೋಪ ಮಾಡಿದ್ದಾರೆ. ಲಂಡನ್​ನಲ್ಲಿ ನಡೆದ​ ಕಾನ್ಫರೆನ್ಸ್​ ಉದ್ದೇಶೀಸಿ ಮಾತನಾಡುವ ವೇಳೆ, “ಭಾರತದಲ್ಲಿ ಬಳಕೆ ಮಾಡುವ ಇವಿಎಂಗಳನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು” ಎಂದು ಹೇಳಿದ್ದಾರೆ. ಆದರೆ, ಇದೊಂದು ದುರುದ್ದೇಶ ಪೂರಿತವಾದ ಆರೋಪ ಎಂದಿರುವ ಚುನಾವಣಾ ಆಯೋಗ, ಈ ಆರೋಪ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

ಚುನಾವಣಾ ಆಯೋಗದ ಮುಖ್ಯ ತಾಂತ್ರಿಕ ತಜ್ಞ ರಜತ್​ ಮೂನಾ​ ಈ ಆರೋಪವನ್ನು ಸಂಪೂರ್ಣವಾಗಿ ಅಲ್ಲ ಗಳೆದಿದ್ದಾರೆ. “ಇವಿಎಂನಲ್ಲಿರುವ ಮಾಹಿತಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಈ ಯಂತ್ರ ಹೊರಗಿನ ಯಾವುದೇ ಮಾಹಿತಿಯನ್ನು ಸ್ವೀಕರಿಸುವುದಿಲ್ಲ. ಭಾರತ್​ ಎಲೆಕ್ಟ್ರಾನಿಕ್ಸ್​ ಮಷಿನ್​ ಇವಿಎಂಗಳನ್ನು ತಯಾರಿಸುತ್ತವೆ. ಇಲ್ಲಿ ಹ್ಯಾಕ್​​ ಮಾಡುವ ಮಾತೇ ಇಲ್ಲ” ಎಂದು ಹೇಳಿದ್ದಾರೆ.

ಭಾನುವಾರ ಕೋಲ್ಕತ್ತದಲ್ಲಿ ನಡೆದ ಸಮಾವೇಶದ ವೇಳೆ ತೃತೀಯ ರಂಗದವರು ತಮ್ಮಬಲ ತೋರಿಸಿದ್ದವು. ಈ ವೇಳೆ ಇವಿಎಂ ವಿರುದ್ಧ ಈ ಪಕ್ಷಗಳು ಅಪಸ್ವರ ಎತ್ತಿದ್ದವು. ಇದಾದ ಬೆನ್ನಲ್ಲೇ ಈ ಆರೋಪ ಕೇಳಿ ಬಂದಿರುವುದು ಪ್ರತಿಪಕ್ಷಗಳಿಗೆ ಬಲ ಬಂದಂತಾಗಿದೆ. ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

Comments are closed.