ರಾಷ್ಟ್ರೀಯ

ಬಿಜೆಪಿ ತೊರೆದ ಮಾಜಿ ಮುಖ್ಯಮಂತ್ರಿ

Pinterest LinkedIn Tumblr

ಇಟಾನಗರ: ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ವಿವಿಧ ಕಸರತ್ತು ನಡೆಸುತ್ತಿವೆ. ಇದೇ ಬೆನ್ನಲ್ಲೇ ಬಿಜೆಪಿ ಅರುಣಾಚಲದಲ್ಲಿ ಆಘಾತ ಒಂದು ಎದುರಾಗಿದೆ.

ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಗೆಗೊಂಗ್ ಅಪಾಂಗ್ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ.

ಈಗಿನ ಬಿಜೆಪಿ ರಾಜಧರ್ಮ ಪಾಲಿಸದೇ ಅಧಿಕಾರದ ಹಿಂದೆ ಬಿದ್ದಿದೆ ಎಂದು ಟೀಕಿಸಿದ್ದಾರೆ.

ಇತ್ತ ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ‘ಆಪರೇಷನ್ ಕಮಲ’ ಆರಂಭಿಸಿದೆ ಎನ್ನಲಾಗುತ್ತಿರುವ ಬಿಜೆಪಿ, ಕಳೆದ ತಿಂಗಳಷ್ಟೇ ಅಧಿಕಾರ ಕ್ಕೇರಿದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಅದೇ ತಂತ್ರಗಾರಿಕೆಯನ್ನು ಮಾಡುತ್ತಿದೆಯೇ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿವೆ.

ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಆಕ್ರೋಶಗೊಂಡಿರುವ ಬಿಜೆಪಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಕುದುರೆ ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದೆ ಆರೋಪ ಕೇಳಿ ಬಂದಿದೆ. ಈ ಮೂಲಕ ಬಿಜೆಪಿ ಮತ್ತೆ ಅಧಿಕಾರ ಪಡೆಯುವ ಯತ್ನದಲ್ಲಿ ಸಾಗುತ್ತಿದೆ ಎಂದು ಹೇಳಲಾಗಿದೆ.

Comments are closed.