ರಾಷ್ಟ್ರೀಯ

ದೇಶದ ಕೋಟ್ಯಂತರ ಪ್ರತಿಭಾವಂತ ಯುವ ಜನರ ಕನಸುಗಳನ್ನು ನನಸುಗೊಳಿಸುವುದಕ್ಕೆ ಬಿಜೆಪಿ ಬದ್ಧ: ಮೋದಿ

Pinterest LinkedIn Tumblr

ಹೊಸದಿಲ್ಲಿ : ದೇಶದ ಕೋಟ್ಯಂತರ ಪ್ರತಿಭಾವಂತ ಯುವ ಜನರ ಕನಸುಗಳನ್ನು ನನಸುಗೊಳಿಸುವುದಕ್ಕೆ ಭಾರತೀಯ ಜನತಾ ಪಕ್ಷ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದೇ ವೇಳೆ ಬಿಜೆಪಿಯ ಯುವ ವಿಭಾಗವು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಮರಳುವ ಸಲುವಾಗಿ ಆರಂಭಿಸಿರುವ ‘ವಿಜಯ ಲಕ್ಷ -2019’ ಅಭಿಯಾನಕ್ಕೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ವಿಜಯ ಲಕ್ಷ್ಯ ಅಭಿಯಾನದ ಮೂಲಕ ದೇಶಾದ್ಯಂತ ಭಾರೀ ಸಂಖ್ಯೆಯಲ್ಲಿರುವ ಯುವ ಶಕ್ತಿಯು ಸಂಚಯನಗೊಂಡು ಬಿಜೆಪಿ ಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಲಿಷ್ಠ ಜನಾದೇಶ ದೊರಕುವಂತಾಗಲಿ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್‌ ನಲ್ಲಿ ಹಾರೈಸಿದರು.

ಬಿಜೆಪಿ ಯವ ಮೋರ್ಚಾ (ಬಿಜೆವೈಎಂ) ಮುಖ್ಯಸ್ಥೆಯಾಗಿರುವ ಪೂನಂ ಮಹಾಜನ್‌ ಅವರು 17 ವಿಭಿನ್ನ ಕಾರ್ಯಕ್ರಮಗಳನ್ನು ಒಳಗೊಂಡ, “ಲಕ್ಷ್ಯ ಹಮಾರಾ, ಮೋದಿ ದೊಬಾರಾ’ ಎಂಬ ಘೋಷ ವಾಕ್ಯದ “ವಿಜಯ ಲಕ್ಷ್ಯ 2019′ ಅಭಿಯಾನಕ್ಕೆ ಚಾಲನೆ ನೀಡಿದ ಮರು ದಿನವೇ ಮೋದಿ ಅವರು ಈ ಅಭೂತಪೂರ್ವ ಅಭಿಯಾನಕ್ಕೆ ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ.

Comments are closed.