ರಾಷ್ಟ್ರೀಯ

ತೆಲುಗು ನಟಿಯನ್ನು ವಿವಾಹವಾಗಲಿರುವ ನಟ ವಿಶಾಲ್

Pinterest LinkedIn Tumblr


ಚೆನ್ನೈ: ತಮಿಳು ನಟ ವಿಶಾಲ್ ಕೃಷ್ಣ ಅವರು ತಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಅನಿಶಾ ಅಲ್ಲ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಈ ಬಗ್ಗೆ ವಿಶಾಲ್ ತಮ್ಮ ಟ್ವಿಟ್ಟರಿನಲ್ಲಿ, “ಹೌದು. ನಾನು ತುಂಬಾ ಖುಷಿಯಾಗಿದ್ದೇನೆ. ಈಕೆಯ ಹೆಸರು ಅನಿಶಾ ಅಲ್ಲ ಹಾಗೂ ಆಕೆ ನನಗೆ ಯೆಸ್ ಎಂದು ಹೇಳಿದ್ದಾರೆ. ಈಗ ಇದು ಖಚಿತವಾಗಿದೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಪರಿವರ್ತನೆ. ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸುತ್ತೇವೆ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.

ಅನಿಶಾ ಕೂಡ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಶಾಲ್ ಜೊತೆಯಿರುವ ಫೋಟೋವನ್ನು ಹಾಕಿ ಅದಕ್ಕೆ, “ಜೀವನದಲ್ಲಿ ಈಗ ಒಂದು ಹೊಸ ವಿಷಯ ಶುರುವಾಗುತ್ತಿದೆ. ನೀವು ನನಗೆ ಎಲ್ಲವನ್ನು ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಬೆಳವಣಿಗೆ, ನನ್ನ ಕಲಿಕೆ, ನನ್ನ ಸ್ಫೂರ್ತಿ, ನನ್ನ ಸತ್ಯ, ನನ್ನ ನೋವು, ನನ್ನ ಶಕ್ತಿ ಎಲ್ಲದರಲ್ಲೂ ಭಾಗಿಯಾಗಿದ್ದೀರಿ. ಹಾಗಾಗಿ ನಾನು ಈ ಸ್ಥಾನದಲ್ಲಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ತಮ್ಮ ಮದುವೆ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ವಿಶಾಲ್, “ನಿಶ್ಚಿತಾರ್ಥದ ಹಾಗೂ ಮದುವೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ ಈ ವರ್ಷದಲ್ಲೇ ನಾವು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ. ಶುಕ್ರವಾರ ನಮ್ಮಿಬ್ಬರ ಕುಟುಂಬದವರು ಒಟ್ಟಿಗೆ ಸೇರಿ ನಮ್ಮ ಮದುವೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅದಾದ ಬಳಿಕವೇ ನಾನು ನನ್ನ ಮದುವೆಯ ದಿನಾಂಕವನ್ನು ಘೋಷಿಸುತ್ತೇನೆ” ಎಂದು ಹೇಳಿದ್ದಾರೆ.

Comments are closed.