ರಾಷ್ಟ್ರೀಯ

ಆರ್‌ಟಿಐ ಮಾಹಿತಿ ಕೇಳಿದ್ರೆ , ಬಂತು ಬಳಕೆಯಾದ ಕಾಂಡೋಮ್ !

Pinterest LinkedIn Tumblr

ಜೈಪುರ್: ರಾಜಸ್ಥಾನದ ಇಬ್ಬರು ಆರ್‌ಟಿಐ ಕಚೇರಿಗೆ ಪ್ರಶ್ನೆಯೊಂದಕ್ಕೆ ಉತ್ತರಬೇಕೆಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಪೋಸ್ಟ್ ಮೂಲಕ ಬಳಿಸಿದ್ದ ಕಾಂಡೋಮ್ ಗಳು ಬಂದಿದ್ದು, ಇದರಿಂದ ಇಬ್ಬರು ಶಾಕ್ ಆಗಿದ್ದಾರೆ.

ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಎಂಬವರು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದರು. ಇವರಿಬ್ಬರು ರಾಜಸ್ಥಾನದ ಹನುಮಾಂಗಢ್ ಜಿಲ್ಲೆಯ ಭದ್ರಾ ತೆಹ್ಸಿಲ್ ನಲ್ಲಿನ ಚನಿ ಬಡಿ ನಿವಾಸಿಗಳಾಗಿದ್ದು, ಏಪ್ರಿಲ್ 16 ರಂದು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಇಬ್ಬರು 2001 ರಿಂದ ಕೈಗೊಂಡ ಅಭಿವೃದ್ಧಿ ಯೋಜನೆಗಳ ವಿವರಗಳು ಬೇಕೆಂದು ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರಿಗೂ ಉತ್ತರವಾಗಿ ಬಳಸಿದ ಕಾಂಡೋಮ್‍ಗಳನ್ನು ರಾಜ್ಯ ಮಾಹಿತಿ ಆಯೋಗದ ನಿರ್ದೇಶನದಲ್ಲಿ ಗ್ರಾಮ ಪಂಚಾಯತ್ ಅವರು ಕಳುಹಿಸಿದ್ದಾರೆ.

ನಾನು ಮೊದಲ ಎನ್ವಲಪ್ ತೆಗೆದು ನೋಡಿದಾಗ ಅದರಲ್ಲಿ ಹಳೆಯ ಪತ್ರಿಕೆಯಿಂದ ಸುತ್ತವರಿದಿದ್ದ ಕಾಂಡೋಮ್ ಗಳು ಪತ್ತೆಯಾದವು. ನಾನು ತುಂಬಾ ಆಶಯದಿಂದ ಕೇಳಿದ್ದ ಮಾಹಿತಿ ಬಂದಿರುತ್ತದೆ ಅಂದುಕೊಂಡಿದ್ದೆ. ಆದರೆ ಇದನ್ನು ನೋಡಿ ನನಗೆ ಶಾಕ್ ಆಗಿತ್ತು. ಬಳಿಕ ಕೆಲವು ಪ್ರಮುಖ ಗ್ರಾಮದ ಸದಸ್ಯರ ಉಪಸ್ಥಿತಿಯಲ್ಲಿ ಮತ್ತೊಬ್ಬರಿಗೆ ಬಂದಿದ್ದ ಎನ್ವಲಪ್ ತೆಗೆಯಲಾಗಿದೆ. ಅದರಲ್ಲೂ ಇದೇ ರೀತಿಯಾಗಿ ಹಳೆಯ ಪತ್ರಿಕೆಯಲ್ಲಿ ಮುಚ್ಚಿ ಬಳಸಿದ ಕಾಂಡೋಮ್ ಕಳುಹಿಸಿದ್ದಾರೆ. ಈ ಬಾರಿ ಪ್ಯಾಕ್ ತೆಗೆದು ನೋಡುವಾಗ ಅದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ವಿಕಾಸ್ ಚೌಧರಿ ತಿಳಿಸಿದ್ದಾರೆ.

ಈ ಘಟನೆಯಿಂದ ವಿಕಾಸ್ ಚೌಧರಿ ಖಿನ್ನತೆಯಿಂದ ಮಾನಸಿಕವಾಗಿ ಬಳಲುತ್ತಿದ್ದಾರೆ. ಪಂಚಾಯತ್ ಹೇಗೆ ಕೆಲಸ ಮಾಡುತ್ತಿದೆ? ಒಂದು ನಾಗರಿಕ ಸಂಸ್ಥೆಯಾಗಿ ಈ ರೀತಿ ಉತ್ತರ ನೀಡಿದೆ ಎಂದರೆ ನನಗೆ ನಂಬಲು ಸಾಧ್ಯವಿಲ್ಲ. ಆರ್‌ಟಿಐ ಪ್ರತ್ಯುತ್ತರವನ್ನು ಸ್ವೀಕರಿಸಿದ ನಂತರ ನನಗೆ ನಿಜಕ್ಕೂ ಬೇಸರವಾಗಿದೆ ಎಂದು ಲಾಲ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಷದ್‍ನ CEO ನವನೀತ್ ಕುಮಾರ್, ಅಪರಿಚಿತ ವ್ಯಕ್ತಿಗಳು ಈ ರೀತಿ ಆರ್‌ಟಿಐ ಅಡಿ ಉತ್ತರವಾಗಿ ಕಾಂಡೋಮ್ ಗಳನ್ನು ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಇದು ವಿಷಾದನೀಯ ಮತ್ತು ಕಾನೂನುಬಾಹಿರವಾದ ಕಾರ್ಯವಾಗಿದ್ದು, ಶೀಘ್ರವೇ ಈ ಕುರಿತು ತನಿಖೆ ನಡೆಸಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Comments are closed.