ರಾಷ್ಟ್ರೀಯ

ಜನರ ಖಾತೆಗೆ 10 ರಿಂದ 25 ಸಾವಿರ ಹಣ:: ‘ಮೋದಿ ಜಿ ಕಳುಹಿಸಿದ್ದಾರೆ’ ಎಂದ ಶಾಸಕ

Pinterest LinkedIn Tumblr


ನವದೆಹಲಿ: ನಿಮಗೆ ಗೊತ್ತಿಲ್ಲದೇ ನಿಮ್ಮ ಖಾತೆಗೆ ಹಣ ಬಂದರೆ ಬಹುಶಃ ನೀವೂ ದಿಗ್ಭ್ರಮೆಗೊಳ್ಳುತ್ತೀರಿ. ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯಲ್ಲಿ ಇದೇ ರೀತಿ ನಡೆಯುತ್ತಿದೆ. ಬರ್ಧಮಾನ್ನಲ್ಲಿರುವ ಜನರ ಬ್ಯಾಂಕ್ ಖಾತೆಗೆ ಮತ್ತೆ ಹಣ ಬಂದಿದ್ದು ಜನರು ಆಘಾತಕ್ಕೊಳಗಾಗಿದ್ದಾರೆ. ಹಣ ಖಾತೆಗೆ ಬರುತ್ತಿದ್ದರೂ ಆ ಹಣ ಎಲ್ಲಿಂದ ಬರುತ್ತಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಪಂಚಾಯತ್ ಸಮಿತಿ, ಶಿಬ್ಲುನ್, ಬೆಲೋನ್, ತೋಲಾಬರಿ, ಸೇನಾಪದಾ, ಅಂಬಾಲಗ್ರಾಮ್, ನಬ್ಗ್ರಾಮ್ ಮತ್ತು ಗಂಗಾಟೆಕುರಿಯ ಪೂರ್ವ ಬರ್ಧಮಾನ್ ಜಿಲ್ಲೆಯ ಕೆತುಗ್ರಾಮ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಜನರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಿದೆ.

10 ರಿಂದ 25 ಸಾವಿರ ಹಣ:
ಜನರ ಖಾತೆಗೆ 10 ರಿಂದ 25 ಸಾವಿರ ರೂ. ಹಣ ಠೇವಣಿ ಮಾಡಲಾಗಿದೆ. ಈ ಹಣವನ್ನು ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್ಬಿಐ ಖಾತೆಗಳಲ್ಲಿ ಈ ರೀತಿ ಹಣ ಠೇವಣಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಮಾಧ್ಯಮಗಳು ಬ್ಯಾಂಕ್ ಮ್ಯಾನೇಜರ್ ಅನ್ನು ಕೇಳಿದಾಗ, ಅವರು ಖಾತೆಗಳಲ್ಲಿ ಹಣ ಠೇವಣಿ ಆಗಿರುವುದನ್ನು ದೃಢಪಡಿಸಿದರು. ಆದರೆ ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳಿದಾಗ ಅವರು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

NEFT ಮೂಲಕ ಬರುತ್ತಿದೆ ಹಣ:
ಜನರ ಖಾತೆಗಳಿಗೆ ಈ ಹಣ NEFT ಮೂಲಕ ಬರುತ್ತಿದೆ. “ಪ್ರಧಾನಮಂತ್ರಿ ಕಪ್ಪು ಹಣ ಬರುವುದು ಎಂದು ಹೇಳಿದ್ದರು. ಹಣ ಅಲ್ಲಿಂದಲೇ ಬರುತ್ತಿರಬಹುದು” ಎಂದು ಕೇತುಗ್ರಾಮ್ ಎಂಎಲ್ಎ ಶೇಖ್ ಶಾಹ್ವಾವಾಝ್ ಹೇಳಿದ್ದಾರೆ. ಈ ರೀತಿಯಲ್ಲಿ ಕೆಲವು ಗ್ರಾಮಸ್ಥರು ಕೂಡ ಆ ಹಣವನ್ನು ಸ್ವೀಕರಿಸಿತ್ತಾರೆ. ಆಡಳಿತವು ಅದರ ಹಿಂದಿನ ಪೂರ್ಣ ಸತ್ಯದ ಬಗ್ಗೆ ತಿಳಿದಿಲ್ಲವಾದರೂ. ಕಟ್ವಾ ಸಬ್ ಡಿವಿಷನ್ ಆಫೀಸರ್ ಸೌಮ್ಯ ಪಾಲ್ ಈ ಬಗ್ಗೆ ಮಾತನಾಡುತ್ತಾ, ಇದೀಗ ಅವರು ಇದನ್ನು ಪರೀಕ್ಷಿಸಬೇಕಾಗಿದೆ ಎಂದಿದ್ದಾರೆ.

ಬ್ಯಾಂಕ್ ಪಾಸ್ಬುಕ್ನಲ್ಲಿ ತೋರಿಸುವ ಖಾತೆಯಲ್ಲಿ ಸುಮಾರು 14 ಸಾವಿರ ರೂಪಾಯಿ ಠೇವಣಿ ಮಾಡಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಜನರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಖಾತೆಗೆ ಜಮಾ ಆಗಿರುವ ಹಣವನ್ನು ಪಡೆಯಲು ಜನರು ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

Comments are closed.