ರಾಷ್ಟ್ರೀಯ

ಶಾರದಾ ಚಿಟ್‌ ಫಂಡ್‌ ಹಗರಣ: ಚಿದಂಬರಂ ಪತ್ನಿ ನಳಿನಿ ವಿರುದ್ಧ ಸಿಬಿಐ ಆರೋಪಪಟ್ಟಿ

Pinterest LinkedIn Tumblr


ಹೊಸದಿಲ್ಲಿ: ಶಾರದಾ ಚಿಟ್‌ ಫಂಡ್‌ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪತ್ನಿ ನಳಿನಿ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದೆ.

ಈ ಹಗರಣದಲ್ಲಿ ಶಾರದಾ ಸಮೂಹ ಸಂಸ್ಥೆಗಳಿಗೆ ನಳಿನಿ 104 ಕೋಟಿ ರೂ. ಪಡೆದಿದ್ದರು ಎಂದು ವಿವರಿಸಲಾಗಿದೆ.

ಶಾರದಾ ಸಮೂಹ ಸಂಸ್ಥೆಗಳ ಸುದೀಪ್ತಾ ಸೆನ್‌ ಮತ್ತು ಇತರೆ ಆರೋಪಿಗಳೊಂದಿಗೆ ಸೇರಿ ನಳಿನಿ ಸಂಚು ರೂಪಿಸಿ ಹಣದ ಅವ್ಯವಹಾರ ನಡೆಸಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.

ಕೇಂದ್ರದ ಮಾಜಿ ಸಚಿವರಾದ ಮಾತಂಗ್‌ ಸೆನ್‌ ಪತ್ನಿ ಮನೋರಂಜನಾ ಸಿನ್ಹಾ ಅವರೇ ನಳಿನಿ ಅವರನ್ನು ಸುದೀಪ್ತಾ ಸೆನ್‌ಗೆ ಪರಿಚಯ ಮಾಡಿಕೊಟ್ಟಿದ್ದರು. ಈ ಕುರಿತು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ತಿಳಿಸಿದ್ದಾರೆ.

ಅಧಿಕ ಬಡ್ಡಿದರ ನೀಡುವ ಆಮಿಷವೊಡ್ಡಿದ್ದ ಶಾರದ್‌ ಚಿಟ್‌ ಫಂಡ್‌ ಜನರಿಂದ 2500 ಕೋಟಿ ರೂ. ಸಂಗ್ರಹಿಸಿತ್ತು. ಆದರೆ ಯಾರಿಗೂ ಅದನ್ನು ಮರು ಪಾವತಿಸಿರಲಿಲ್ಲ. ಇದು ಭಾರಿ ದೊಡ್ಡ ಹಗರಣವಾಗಿತ್ತು.

2013ರಲ್ಲಿ ಈ ಕಂಪನಿಯನ್ನು ಮುಚ್ಚಲಾಗಿತ್ತು. 2014ರದಲ್ಲಿ ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಕೋರ್ಟ್‌ ವಹಿಸಿತ್ತು.

Comments are closed.