ರಾಷ್ಟ್ರೀಯ

ವಾಟ್ಸಪ್ ಗ್ರಾಹಕರೇ ಎಚ್ಚರ ! ಮೋಸ ಹೋಗುವ ಮೊದಲು ಈ ಸುದ್ದಿ ಓದಿ….

Pinterest LinkedIn Tumblr

ಈಗೀಗ ಆನ್ ಲೈನ್ ವಂಚಕರು ವಿವಿಧ ತಂತ್ರಗಳನ್ನು ಬಳಸಿ ಜನರನ್ನು ವಂಚಿಸುತ್ತಿದ್ದಾರೆ. ಹಲವು ಬಾರಿ ನಕಲಿ ಸುದ್ದಿಗಳಾವುದು, ಅಸಲಿ ಸುದ್ದಿಗಳಾವುದು ಎಂದು ಗುರುತಿಸುವುದು ಕಠಿಣವಾಗುತ್ತದೆ.ಕೆಲವೊಬ್ಬರು ತಮ್ಮ ಹಳೆ ತಂತ್ರಗಳನ್ನೇ ಕೆಲಮಟ್ಟಿಗೆ ಮಾರ್ಪಡಿಸಿ ಹೊಸ ಮಿಕಗಳನ್ನು ಬಲೆಗೆ ಕೆಡವಿಕೊಳ್ಳಲೂ ಪ್ರಯತ್ನಿಸುತ್ತಾರೆ. ಇದೀಗ ಇಂತಹುದೇ ಒಂದು ಸುದ್ದಿ ಮತ್ತೆ ಸಿಕ್ಕಿದೆ.

ಈ ಹಿಂದೆ 2016ರಲ್ಲಿ ಸುದ್ದಿಯಾಗಿದ್ದ “ವಾಟ್ಸಪ್ ಪ್ಲಸ್” ಅಥವಾ ವಾಟ್ಸಪ್ ಗೋಲ್ಡ್ ಸಂದೇಶಗಳು ಬಂದಿದ್ದು ನೆನಪಿದೆಯಷ್ಟೇ, ಇದೇ ವಾಟ್ಸಪ್ ಗೋಲ್ಡ್ ಕುರಿತಂತೆ ಹೊಸ ಸಂದೇಶವೊಂದು ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಕೆಲವೊಂದು ವಾಟ್ಸಪ್ ಬಳಕೆದಾರರಿಗೆ ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಗೋಲ್ಡ್, ವಾಟ್ಸಪ್ ಪ್ಲಸ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಈ ಲಿಂಕ್ ಅನ್ನು ಒತ್ತಿರಿ ಎಂಬ ಸಂದೇಶ ಬಂದಿದೆ. ವಂಚಕರು ಇದರೊಡನೆ ನೀವು ರಹಸ್ಯ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದ್ದೀರಿ ಎಂದೂ ಹೇಳುತ್ತಾರೆ. ಆದರೆ ಇದು ಕೇವಲ ಸುಳ್ಳು ಸಂದೇಶವಾಗಿರಲಿದೆ.

ನಕಲಿ ಸಂದೇಅದಲ್ಲಿ “ಮಾರ್ಟಿನೆಲ್” ಎಂದು ಪದ ಬಳಕೆ ಮಾಡಲಾಗಿದೆ.ಸಂದೇಶವನ್ನು ಹಾಗೂ ಸಂದೇಶದ ಜತೆ ಕಳೀಸಿದ ಯಾವುದೇ ವೀಡಿಯೋ, ಅಥವಾ ಅಪ್ಲಿಕೇಶನ್ ಅನ್ನು ನವೀಕರಿಸುವ ಲಿಂಕ್ ಅನ್ನು ಸ್ವೀಕರಿಸಬಾರದು ಎಂದು ಬಳಕೆದಾರರಿಗೆ ಸಲಹೆ ನೀಡಲಾಗುತ್ತಿದೆ. ಈ ಹೊಸ ವಂಚನೆ ಕುರಿತು ಬಳಕೆದಾರರನ್ನು ಎಚ್ಚರಿಸಲು ಟ್ವಿಟ್ಟರಟಿ ಎಂಬ ಸಾಮಾಜಿಕ ಮಾಧ್ಯಮದ ವೇದಿಕೆ ಮುಂದಾಗಿದೆ. ಮಾಲ್ವೇರ್ ಸೈಟ್ ಗೆ ಕಾರಣವಾಗುವ ‘ಮಾರ್ಟಿನೆಲ್’ ಲಿಂಕ್ ತೆರೆಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.. ಈ ಅಪ್ಡೇಟ್ ಅನ್ನು ಡೌನ್ಲೋಡ್ ಮಾಡುವುದರಿಂದ ನಿಮ್ಮ ಮೊಬೈ ಹಾಗೂ ಖಾಸಗಿ ಡೇಟಾಗಳಿಗೆ ದಕ್ಕೆಯಾಗುವ ಸಂಭವವಿದೆ.

ಒಂದು ವೇಳೆ ನಿಮಗೆ ತಿಳಿದಿಲ್ಲವಾದರೆ ಎಂದಿಗೂ ಇಂತಹಾ ಅಪ್ಲಿಕೇಷನ್ ಡೌನ್ಲೋಡ್ ಲಿಂಕ್ ಪ್ರೆಸ್ ಮಾಡಬೇಡಿ. ನಿಮಗೆ ವಾಟ್ಸಪ್ ಅಪ್ಡೇಟ್ ಆಗಬೇಕಾದಲ್ಲಿ ನೇರವಾಗಿ ಗೂಗಲ್ ಪ್ಲೆ ಸ್ಟೋರ್ ಗೆ ಹೋಗಿ ಅಲ್ಲಿನ ಅಪ್ಡೇಷನ್ ಲಿಂಕ್ ಮಾತ್ರ ಬಳಕೆ ಮಾಡಿಕೊಳ್ಳಿ. ಆಗ ಸ್ವಯಂಚಾಲಿತ್ತವಾಗಿ ಎಲ್ಲಾ ಅಪ್ಡೇಟ್ ಗಳೂ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಆಗಲಿದೆ.

ಕಳೆದ ವಾರದ ಪ್ರಾರಂಭದಲ್ಲಿ ಬಹಳಷ್ಟು ಜನ ವಾಟ್ಸಪ್ ಇನ್ನು ಕೆಲ ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ ಎಂಬ ಸಂದೇಶವನ್ನು ಸ್ವೀಕರಿಸಿದ್ದಾರೆ.2019ರಿಂದ ಕೆಲವು ಮೊಬೈಲ್ ಗಳಲ್ಲಿ ವಾಟ್ಸಪ್ ಬಳಕೆ ಸಾಧ್ಯವಿಲ್ಲ ಎನ್ನಲಾಗಿತ್ತು.ಈ ವೇಳೆ ಇನ್ನೊಂದಷ್ಟು ಮಂದಿಗೆ ನಿಮ್ಮ ಮೊಬೈಲ್ ನಲ್ಲಿ ಇನ್ನು ಮುಂದೆ ಸಹ ವಾಟ್ಸಪ್ ಬೇಕಾದರೆ ಈ ಲಿಂಕ್ ಕ್ಲಿಕ್ಕಿಸಿ ಎಂದು ಸಂದೇಶ ಬಂದಿದೆ. ಆದರೆ ಪರಿಶೀಲಿಸಲಾಗಿ ಇದೊಂದು ಸುಳ್ಳು, ವಂಚನೆಯ ಸಂದೇಶ ಎನ್ನುವುದು ಪತ್ತೆಯಾಗಿದೆ.

ನಿಮ್ಮ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ! ನಕಲಿ ಸಂದೇಶಗಳು / ಇಮೇಲ್ ಗಳ ಬಗ್ಗೆ ಎಚ್ಚರವಾಗಿದ್ದರೆ ಉತ್ತಮ.ಆದ್ದರಿಂದ, ಮುಂದಿನ ಬಾರಿ ಯಾರಾದರೂ ಭಾರೀ ಕೊಡುಗೆಯನ್ನು ನೀಡಿದ ಸಂದೇಶ ನಿಮಗೆ ಕಳಿಸಿದರೆ ಅದು ನಕಲಿಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ.

Comments are closed.