ರಾಷ್ಟ್ರೀಯ

ಮಧ್ಯಪ್ರದೇಶ: ಹಸಿಲು ತಾಳಲಾರದೇ ಕೀಟನಾಶಕ ಕುಡಿದ ಬಾಲಕ!

Pinterest LinkedIn Tumblr

ನವದೆಹಲಿ: ನಿರಂತರ ಹಸಿವಿನಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗದ ಬಾಲಕನೊಬ್ಬ ಹಸಿಲು ತಾಳಲಾರದೇ ಕೀಟನಾಶಕ ಕುಡಿದಿರುವ ದಾರುಣ ಘಟನೆ ಮಧ್ಯಪ್ರದೇಶದ ರಾಟ್ಲಾಂ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿ ಸ್ಥಳಕ್ಕೆ ತೆರಳಿದ್ದಾರೆ,

ಡಿಸೆಂಬರ್ 31 ರಂದು ಘಟನೆ ನಡೆದಿದ್ದು, ಬಾಲಕನ ವಯಸನ್ನು ಬಹಿರಂಗ ಪಡಿಸಿಲ್ಲ, ಸ್ಥಳೀಯ ಪಡಿತರ ಅಂಗಡಿಯವರು ಪದೇ ಪದೇ ಮನವಿ ಮಾಡಿದರೂ ಬಾಲಕನಿಗೆ ಗೋದಿ ನೀಡಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ,

ಹೀಗಾಗಿ ಹಸಿವು ತಾಳಲಾರದೇ ಬಾಲಕ ಕೀಟನಾಶಕ ಕುಡಿದಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ, ಈ ಸಂಬಂಧ ಎನ್ ಸಿಪಿಸಿಆರ್ ಶೀಘ್ರವೇ ವರದಿ ಸಲ್ಲಿಸಲಿದೆ.

Comments are closed.