ಅಂತರಾಷ್ಟ್ರೀಯ

ಅಮೆರಿಕದ ಟೆನ್ನೆಸ್ಸೀಯದ ಕೊಲ್ಲಿವಿಲ್ಲೆಯಲ್ಲಿನ ನಿವಾಸದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡ: ತೆಲಂಗಾಣದ ಮೂವರು ಒಡಹುಟ್ಟಿದವರು ಸಾವು

Pinterest LinkedIn Tumblr

ಹೈದರಾಬಾದ್: ಅಮೆರಿಕದ ಟೆನ್ನೆಸ್ಸೀಯದ ಕೊಲ್ಲಿವಿಲ್ಲೆಯಲ್ಲಿನ ನಿವಾಸದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮೂವರು ಸಹೋದರು, ಸಹೋದರಿಯರು ಮೃತಪಟ್ಟಿದ್ದಾರೆ.

ಮೃತರನ್ನು ಶರೋನ್ ನಾಯಕ್(14), ಜೋಯ್ ನಾಯಕ್(15) ಮತ್ತು ಅರೋನ್ ನಾಯಕ್(17) ಎಂದು ಗುರುತಿಸಲಾಗಿದೆ. ಈ ಮೂವರು ಮಿಷಿನರಿ ಕುಟುಂಬಕ್ಕೆ ಸೇರಿದ್ದು, ಅವರ ಪೋಷಕರು ಮೂಲತಃ ನೆರೆಡುಗುಮ್ಮ ಮಂಡಲದ ಗುರಪ್ಪ ತಾಂಡದವರು ಎನ್ನಲಾಗಿದೆ.

ವರದಿಗಳ ಪ್ರಕಾರ, ಈ ಮೂವರು ಸಹೋದರ, ಸಹೋದರಿಯರ ಪೋಷಕರು ಭಾರತಕ್ಕೆ ಮಿಷಿನರಿ ಪ್ರವಾಸಕ್ಕೆ ಆಗಮಿಸಿದ್ದಾಗ ದಾನ್ಯ ಮತ್ತು ಕೇರಿ ದಂಪತಿಗಳ ನಿವಾಸದಲ್ಲಿದ್ದರು. ಡಿಸೆಂಬರ್ 23ರಂದು ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಕೇರಿ ಸಹ ಮೃತಪಟ್ಟಿದ್ದಾರೆ.

Comments are closed.