ರಾಷ್ಟ್ರೀಯ

ಆನ್‍ಲೈನ್’ನಲ್ಲಿ ‘ಗಿಳಿ’ ಆರ್ಡರ್

Pinterest LinkedIn Tumblr


ನವದೆಹಲಿ: ಜನರ ಧ್ವನಿಯಲ್ಲಿ ಮಾತನಾಡಬಲ್ಲ ಪಕ್ಷಿ ಎಂದರೆ ಗಿಳಿ. ಜನರ ಧ್ವನಿಯಲ್ಲಿ ಮಾತನಾದುವುದೇನೋ ಸರಿ. ಆದರೆ, ಬ್ರಿಟನ್ನಿನಲ್ಲಿ ಒಂದು ಗಿಳಿ ಆನ್ಲೈನ್ ನಲ್ಲಿ ಆರ್ಡರ್ ಮಾಡುವ ಮೂಲಕ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಹೌದು, ಧ್ವನಿಯನ್ನು ಅನುಕರಿಸುವುದರ ಜೊತೆಗೆ ತಾಂತ್ರಿಕ ಜ್ಞಾನವೂ ಹೊಂದಿದ್ದ ಗಿಳಿಯೊಂದು ತನ್ನ ಮಾಲೀಕನ ಧ್ವನಿಯಲ್ಲಿ ಏನ್ ಏನ್ ಆರ್ಡರ್ ಮಾಡಿದೆ ಗೊತ್ತಾ…

ಮಾಧ್ಯಮ ವರದಿಗಳ ಪ್ರಕಾರ, ಸ್ಮಾರ್ಟ್ ಸ್ಪೀಕರ್ ಅಲೆಕ್ಸಾ ಅವರ ಸಹಾಯದಿಂದ ಈ ಗಿಳಿ ಮಾಲೀಕನ ಧ್ವನಿಯಲ್ಲಿ ಆನ್‍ಲೈನ್’ನಲ್ಲಿ ವಿವಿಧ ಸಾಮಾನುಗಳನ್ನು ಆರ್ಡರ್ ಮಾಡಿದೆ. ರೊಕೊ ಎಂಬ ಹೆಸರಿನ ಆಫ್ರಿಕಾದ ಬೂದು ಗಿಳಿ, ಐಸ್ ಕ್ರೀಮ್ನಿಂದ ಹಿಡಿದು ಕಲ್ಲಂಗಡಿವರೆಗೆ, ಅಲ್ಲದೆ ಒಣಗಿದ ಹಣ್ಣುಗಳು ಮತ್ತು ಬ್ರೊಕೊಲಿ(ಒಂದು ವಿಧದ ತರಕಾರಿ)ಯನ್ನು ಅಮೆಜಾನ್ ನಲ್ಲಿ ಆರ್ಡರ್ ಮಾಡಿದೆ. ಇಷ್ಟೇ ಅಲ್ಲ ತನ್ನ ಮಾಲೀಕನ ಧ್ವನಿಯಲ್ಲಿ ಈ ಗಿಳಿ ಮತ್ತೊಮ್ಮೆ ಲೈಟ್ ಬಲ್ಬ್ ಮತ್ತು ಗಾಳಿಪಟವನ್ನು ಕೂಡ ಆರ್ಡರ್ ಮಾಡಿದೆ.

ಗಿಳಿಯ ಮಾಲೀಕರಾದ ಮೇರಿಯನ್ ಅಮೆಜಾನ್ ಶಾಪಿಂಗ್ ಆರ್ಡರ್ ಪಟ್ಟಿಯನ್ನು ನೋಡಿದಾಗ ಇದು ಬಹಿರಂಗವಾಯಿತು. ಪಟ್ಟಿಯಲ್ಲಿದ್ದ ಸಾಮಾನುಗಳನ್ನು ತಾವು ಆರ್ಡರ್ ಮಾಡಿಯೇ ಇರಲಿಲ್ಲ ಎಂದು ಹೇಳಿದ್ದಾರೆ.

‘ಡೈಲಿ ಮೇಲ್’ ವರದಿಯ ಪ್ರಕಾರ, ರೋಕೊ ಎಂಬ ಈ ಗಿಳಿ ಹಿಂದೆ ಬರ್ಕ್ಷೈರ್, ಅಭಯಾರಣ್ಯದಲ್ಲಿ ರಾಷ್ಟ್ರೀಯ ಅನಿಮಲ್ ವೆಲ್ಫೇರ್ ಟ್ರಸ್ಟ್ನಲ್ಲಿ ನೆಲೆಸಿತ್ತು. ಮಿತಿಮೀರಿದ ಮಾತಿನಿಂದಾಗಿ ಅಲ್ಲಿಂದ ಆ ಗಿಳಿಯನ್ನು ಕಳುಹಿಸಲಾಯಿತು.

ನ್ಯಾಷನಲ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಅಭಯಾರಣ್ಯದಲ್ಲಿ (NWT) ಕೆಲಸ ಮಾಡಿದ್ದ ಮೇರಿಯನ್ ಆ ಗಿಳಿಯನ್ನು ಮನೆಗೆ ಕರೆತಂದರು. ನೋಡು ನೋಡುತ್ತಲೇ ಆ ಗಿಳಿ ಎಲ್ಲವನ್ನೂ ಕಲಿತಿದೆ. ಇದೀಗ ಗಿಳಿಯ ಈ ನಡವಳಿಕೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ.

Comments are closed.