ರಾಷ್ಟ್ರೀಯ

ಗೋಲ್ಡನ್ ಟೆಂಪಲ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗು, ಟಾಯ್ಲೆಟ್ ಸೀಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟ ಅಮೆಜಾನ್ ! ಸಿಖ್ ಸಮುದಾಯದ ಆಕ್ರೋಶ

Pinterest LinkedIn Tumblr

ನವದೆಹಲಿ: ಇ-ಕಾಮರ್ಸ್ ಸಂಸ್ಥೆ ಅಮೆಜಾನ್, ಗೋಲ್ಡನ್ ಟೆಂಪಲ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದು, ಸಿಖ್ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ.

ಈ ಹಿಂದೆ ಡೋರ್ ಮ್ಯಾಟ್ ಗಳ ಮೇಲೆ ಭಾರತದ ರಾಷ್ಟ್ರಧ್ವಜ ಹಾಗೂ ಮಹಾತ್ಮಾಗಾಂಧಿ ಚಿತ್ರವಿರುವ ಚಪ್ಪಲಿಯನ್ನು ಮಾರಾಟಕ್ಕಿಟ್ಟು ಛೀಮಾರಿ ಹಾಕಿಸಿಕೊಂಡಿದ್ದ ಅಮೆಜಾನ್ ಈಗ ಮತ್ತೆ ಗೋಲ್ಡನ್ ಟೆಂಪ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಅನ್ನು ಮಾರಾಟಕ್ಕಿಟ್ಟಿದೆ.

ಅಮೆಜಾನ್, ಐತಿಹಾಸಿಕ ಪವಿತ್ರ ಗೋಲ್ಡನ್ ಟೆಂಪ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಅನ್ನು ಮಾರಾಟಕ್ಕಿಟ್ಟಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅದನ್ನು ಕೂಡಲೇ ತೆಗೆದು ಹಾಕಬೇಕು ಎಂದು ಸಿಖ್ ಒಕ್ಕೂಟದ ಹಿರಿಯ ವ್ಯವಸ್ಥಾಪಕ ಸಿಮ್ ಸಿಂಗ್ ಅವರು ಅಮೆಜಾನ್ ಸಿಇಒಗೆ ಪತ್ರ ಬರೆದಿದ್ದಾರೆ.

ಸಿಖ್ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಮೆಜಾನ್, ಕ್ಷಮಿಸಿ, ಆ ಉತ್ಪನ್ನಗಳನ್ನು ಹುಡುಕಲು ನಮಗೆ ಸಾಧ್ಯವಾಗುತ್ತಿಲ್ಲ. ವೆಬ್ ಸೈಟ್ ನಿಂದ ಆ ಉತ್ಪನ್ನಗಳನ್ನು ಈಗಾಗಲೇ ತೆಗೆದುಹಾಕಿರುವ ಸಾಧ್ಯತೆ ಇದೆ ಎಂದು ಸಿಂಗ್ ಪತ್ರಕ್ಕೆ ಉತ್ತರಿಸಿದೆ.

Comments are closed.