ರಾಷ್ಟ್ರೀಯ

ಸಿಮ್‌ಗೆ ಆಧಾರ್‌ ಕಡ್ಡಾಯ, ಬ್ಯಾಂಕ್‌ ಖಾತೆಗೆ ಐಚ್ಛಿಕ

Pinterest LinkedIn Tumblr


ಹೊಸದಿಲ್ಲಿ: ಬ್ಯಾಂಕ್‌ ಹಾಗೂ ಮೊಬೈಲ್‌ ಕಂಪನಿಗಳಿಗೆ ಆಧಾರ್‌ ಜೋಡಣೆ ಸಂಬಂಧ ಎರಡು ಕಾನೂನುಗಳಿಗೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಸಭೆ ಸೋಮವಾರ ತೀರ್ಮಾನಿಸಿದೆ. ಈ ತಿದ್ದುಪಡಿ ಸಂಸತ್ತಿನಲ್ಲಿ ಅಂಗೀಕಾರವಾದರೆ, ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಯ ಐಚ್ಛಿಕವಾಗಲಿದೆ. ಆದರೆ, ಹೊಸ ಸಿಮ್‌ ಕಾರ್ಡ್‌ ಪಡೆಯಲು ಆಧಾರ್‌ ಕಡ್ಡಾಯವಾಗಲಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಬ್ಯಾಂಕ್‌ ಖಾತೆ, ಹೊಸ ಸಿಮ್‌ ಕಾರ್ಡ್‌ ಖರೀದಿ, ಶಾಲಾ ನೋಂದಣಿ ಮುಂತಾದ ಹಲವು ಉದ್ದೇಶಗಳಿಗೆ ಆಧಾರ್‌ ಸಂಖ್ಯೆ ಕಡ್ಡಾಯ ಜೋಡಣೆಯನ್ನು ರದ್ದುಗೊಳಿಸಿತ್ತು. ಇದಕ್ಕೆ ಕಾನೂನು ಸಿಂಧುತ್ವವಿಲ್ಲ ಎಂದಿತ್ತು. ಹೀಗಾಗಿ ಸರಕಾರ ಟೆಲಿಗ್ರಾಫ್‌ ಕಾಯಿದೆಗೆ ತಿದ್ದುಪಡಿ ತಂದು, ಸಿಮ್‌ ಕಾರ್ಡ್‌ಗೆ ಆಧಾರ್‌ ಜೋಡಣೆಯನ್ನು ಪುರಸ್ಕರಿಸಲು ಮುಂದಾಗಿದೆ.

ಆದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಗೆ (ಪಿಎಂಎಲ್‌ಎ) ತಿದ್ದುಪಡಿ ತರುವ ಮೂಲಕ ಬ್ಯಾಂಕ್‌ಗಳಿಗೆ ಆಧಾರ್‌ ಜೋಡಣೆಯನ್ನು ಐಚ್ಛಿಕ ಗೊಳಿಸಲು ಸರಕಾರ ಸಮ್ಮತಿಸಿದೆ. ಅಲ್ಲದೆ, ಪರಿಶಿಷ್ಟ ಪಂಗಡದ ಜನ ಹೆಚ್ಚಿರುವ ಕಡೆ ನವೋದಯ ವಿದ್ಯಾಲಯಗಳ ಮಾದರಿಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಆರಂಭಿಸಲೂ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.

Comments are closed.