ಮನೋರಂಜನೆ

ಮಲೆಯಾಳಂ ನಟಿ ಲೀನಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ!

Pinterest LinkedIn Tumblr


ಕೊಚ್ಚಿ: ದಕ್ಷಿಣ ಭಾರತದ ವಿವಾದಿತ ನಟಿ ಲೀನಾ ಮರಿಯಾ ಪೌಲ್​ ಒಡೆತನದ ಬ್ಯೂಟಿ ಪಾರ್ಲರ್​ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್​ ದಾಳಿ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕೊಚ್ಚಿಯ ಪನಮ್​​ಪಿಲ್ಲಿ ನಗರದಲ್ಲಿ ಲೀನಾ ಬ್ಯೂಟಿ ಪಾರ್ಲರ್​ ಹೊಂದಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಮೇಲೆ ನಿಂತು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಪಾರ್ಲರ್​ ಬಳಿ ಮುಂಬೈ ಭೂಗತ ಲೋಕದ ಪಾತಕಿ ‘ರವಿ ಪೂಜಾರಿ’ ಹೆಸರು ಬರೆದಿರುವ ಪೇಪರ್ ಎಸೆದು ಹೋಗಿರುವುದು ಹಲವು ಅನುಮಾಗಳನ್ನು ಹುಟ್ಟುಹಾಕಿದೆ.

ದಾಳಿ ವೇಳೆ ಪಾರ್ಲರ್​ ಒಳಗೆ ಸಾಕಷ್ಟು ಜನ ಇದ್ದರು. ಆದರೆ ಯಾರಿಗೂ ಪ್ರಾಣ ಹಾನಿ ಉಂಟಾಗಿಲ್ಲ. ಘಟನೆ ನಡೆಯುವ ಸಂದರ್ಭದಲ್ಲಿ ಲೀನಾ ತಿರುವನಂತರಪುರಂನಲ್ಲಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾರ್ಲರ್​ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದಾರೆ. ಲೀನಾ ‘ಮದ್ರಾಸ್​ ಕೆಫೆ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಇವರು, ವಿವಾದದ ಮೂಲಕ ಸುದ್ದಿಯಾಗುತ್ತಿದ್ದಾರೆ. ಹಣ ವಂಚನೆ ಪ್ರಕರಣವೊಂದರಲ್ಲಿ ಲೀನಾ ಆರೋಪಿ.

Comments are closed.