ರಾಷ್ಟ್ರೀಯ

ಕಾಮಾಗಾರಿ ವೀಕ್ಷಿಸಲು ಬಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿಎಂ ಪರಿಕ್ಕರ್

Pinterest LinkedIn Tumblr


ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ದೆಹಲಿಯ ಎಮ್ಸ್ ಆಸ್ಪತ್ರೆ ಚಿಕಿತ್ಸೆ ಪಡೆದು ಇಂದು [ಭಾನುವಾರ] ಗೋವಾಕ್ಕೆ ವಾಪಸ್ಸಾಗಿದ್ದು, ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಮಂಡೋವಿ ನದಿಯ ನಿರ್ಮಾಣ ಹಂತದ ಸೇತುವೆಯನ್ನು ಪರಿಶೀಲಿಸಿದ್ದಾರೆ. ಕಾಮಗರಿ ಬಳಿ ಕಾರಿನಲ್ಲಿ ಬಂದ ಗೋವಾ ಸಿಎಂ ಗೋವಾ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಷನ್ ಅಧಿಕಾರಿಗಳ ಬಳಿ ಕೆಲಸದ ಪ್ರಗತಿ ಹಾಗೂ ಒಪ್ಪಂದದ ಕುರಿತು ಚರ್ಚೆ ನಡೆಸಿದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸಿಎಂ ಪರಿಕ್ಕರ್ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ಭಾರತಕ್ಕೆ ಆಗಮಿಸಿದ್ದು, ಕಳೆದ 9 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಲವು ದಿನಗಳಿಂದ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದೆ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದರು.

ಆದರೆ ಇದಕ್ಕೆ ವಿರೊಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲ ಮಧ್ಯ ಪ್ರವೇಶಿಸಬೇಕಾದ ರಾಜ್ಯಪಾಲರು ಯಾವುದೆ ಪರ್ಯಾಯ ಆಲೋಚನೆ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದೆ.

ಅಷ್ಟೇ ಅಲ್ಲದೇ ವಿರೋಧ ಪಕ್ಷಗಳು ಸಿಎಂ ಪರಿಕ್ಕರ್ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂದು ರಾಜ್ಯಪಾರಿಗೆ ಮನವಿ ಮಾಡಿದ್ದರು. ಇದೀಗ ಹಲವು ದಿನಗಳ ಬಳಿಕ ಆಸ್ಪತ್ರೆಯಿಂದ ಬಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದ್ದಾರೆ.

Comments are closed.