ರಾಷ್ಟ್ರೀಯ

ಸೈನಿಕರ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ದೇಶವೆಂದೂ ಮರೆಯಲು ಸಾಧ್ಯವಿಲ್ಲ: ನರೇಂದ್ರ ಮೋದಿ

Pinterest LinkedIn Tumblr

ರಾಯ್ ಬರೇಲಿ: ಕಾಂಗ್ರೆಸ್ ಪಕ್ಷ ರೈತರ ವಿಚಾರದಲ್ಲಿ ಸುಳ್ಳು ಹೇಳುತ್ತಾ ಬಂದಿದೆ, ಇನ್ನು ಸೈನಿಕರ ವಿಚಾರದಲ್ಲಿಯಂತೂ ಆ ಪಕ್ಷ ಹೇಗೆ ನಡೆದುಕೊಂಡಿದೆ ಎನ್ನುವುದನ್ನು ದೇಶವೆಂದೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ತ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸ್ವಕ್ಷೇತ್ರ ರಾಯ್ ಬರೇಲಿಗೆ ಭೇಟಿ ನೀಡಿದ್ದು ಅಲ್ಲಿನ ಹಮ್ಸಾಫರ್ ರೇಕ್ ಅತ್ಯಾಧುನಿಕ ರೈಲ್ವೆ ಬೋಗಿ ಕಾರ್ಖಾನೆಯ 900ನೇ ರೈಲ್ವೆ ಕೋಚ್​ಗೆ ಚಾಲನೆ ನೀಡಿದರು. ಬಳಿಕ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

“ಕೇಂದ್ರ ಸರ್ಕಾರವು ರಾಯ್ ಬರೇಲಿಯ ಅಭಿವೃದ್ಧಿಗೆ ಬದ್ಧವಾಗಿದೆ ಆದರೆ ಈ ಹಿಂದಿನ ಸರ್ಕಾರಗಳು ಇದನ್ನು ನಿರ್ಲಕ್ಷಿಸಿದ್ದವು ” ಪ್ರಧಾನಿ ಹೇಳಿದ್ದಾರೆ.”ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆಯು ಹಿಂದಿನ ಸರ್ಕಾರಗಳು ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಹೇಗೆಲ್ಲ ನಿರ್ಲಕ್ಷ ತೋರಿದೆ ಎನ್ನುವುದುಅಕ್ಕೆ ಸಾಕ್ಷಿ” ಎಂದಿದ್ದಾರೆ.

2007ರಲ್ಲಿ ಈ ಕಾರ್ಖಾನೆ ಮಂಜೂರಾಗಿದ್ದರೂ ಇನ್ನೂ ಸರಿಯಾದ ರೀತಿಯಲ್ಲಿ ಬೆಳೆದಿಲ್ಲ ಎಂದು ಮೋದಿ ಹೇಳಿದ್ದಾರೆ.

ರೈತರ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದ ಮೋದಿ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ವಾಗ್ದಾನ ಮಾಡಿದ್ದ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿದ್ದರೂ ಸಾಲಮನ್ನಾ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ಹೇಳಿದರು.

ಉತ್ತರ ಪ್ರದೇಶದ ಕುರಿತು ಹಿಂದಿನ ಸರ್ಕಾರಗ್ಳು ಹೇಗೆ ನಿರ್ಲಕ್ಷ ತೋರಿದೆ ಎನ್ನುವುದನ್ನು ಈಗ ತಿಳಿಯುವ ಕಾಲ ಬಂದಿದೆ, ಮುಂದಿನ ದಿನಗಳಲ್ಲಿ ಇದೇ ಕೋಚ್‌ ಕಾರ್ಖಾನೆಯಲ್ಲಿ ಸೆಮಿ ಹೈಸ್ಪೀಡ್‌, ಮೆಟ್ರೋ, ಅಲ್ಯುಮಿನಿಯಂ ಕೋಚ್‌ಗಳನ್ನು ಇಲ್ಲಿಯೇ ನಿರ್ಮಿಸಲಾಗುತ್ತದೆ.ಇದರಿಂದ ಸಾಕಷ್ಟು ಸಂಖ್ಯೆಯ ಜನರೊಗೆ ಉದ್ಯೋಗ ಲಭಿಸಲಿದೆ, ಲಘು ಹಾಗೂ ಮಧ್ಯಮ ಉದ್ಯಮಿಗಳಿಗೂ ಉಪಯೋಗ ಆಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ನಮಗೆ ದೇಶವೇ ಮೊದಲು ಹೊರತು ಪಕ್ಷವಲ್ಲ. ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡುವ ಯೋಧರು ಯಾವುದೇ ಕಷ್ಟಗಳನ್ನು ಎದುರಿಸದಿರುವಂತೆ ನಾವು ಪ್ರಯತ್ನ ಮಾಡುವೆವು. ಆದರೆ ಇನ್ನೊಂದು ಪಕ್ಷ ಇದೇ ಸೇನೆಯನ್ನು ಯಾವುದಾದರೂ ರೀತಿಯಲ್ಲಿ ನಿಶ್ಯಕ್ತಗೊಳಿಸಬೇಕೆಂದು ಬಯಸುತ್ತಿದೆ.ಆ ಪಕ್ಷಕ್ಕೆ ಸೇನೆ ಸಶಕ್ತವಾಗಿರುವುದು ಬೇಕಾಗಿಲ್ಲ, ಇದಕ್ಕೆ ದೇಶವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.