ರಾಷ್ಟ್ರೀಯ

ಬಂಧಿಸಿ ಕರೆ ತರಲಾಗಿರುವ ‘ಆಗಸ್ಟಾ ವೆಸ್ಟ್ ಲ್ಯಾಂಡ್’ ಹಗರಣದ ಮಧ್ಯವರ್ತಿಯಿಂದ ಬಂಡವಾಳ ಬಯಲಾಗುತ್ತೆ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕಿಡಿ

Pinterest LinkedIn Tumblr

ಸುಮೆರ್ ಪುರ್: ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಗರಣದ ಮಧ್ಯವರ್ತಿ ಬರಲಿ, ಹಾಗ ನಿಮ್ಮ ಬಂಡವಾಳ ಬಯಲಾಗುತ್ತದೆ ಎಂದು ಬುಧವಾರ ಹೇಳಿದ್ದಾರೆ.

ಇಂದಪ ರಾಜಸ್ಥಾನ ವಿಧಾನಸಭೆ ಚುನಾವಣೆಯ ಕೊನೆಯ ದಿನದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಪಿ ಹೆಲಿಕಾಪ್ಟರ್ ಆಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಹಗರಣ ನಡೆದಿದೆ. ಈ ಹಗರಣದ ಮಧ್ಯವರ್ತಿಯನ್ನು ಯುಪಿಎ ಸರ್ಕಾರ ರಕ್ಷಿಸಿತ್ತು. ಆದರೆ ಈ ಚಾಯ್ ವಾಲಾ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ನನ್ನು ದೇಶಕ್ಕೆ ತಂದಿದ್ದಾನೆ. ಆ ಶಕ್ತಿಯನ್ನು ನನಗೆ ದೇಶದ ಜನರು ಕೊಟ್ಟಿದ್ದಾರೆ ಎಂದರು.

ಈ ಮಧ್ಯವರ್ತಿ ಎಲ್ಲಾ ರಹಸ್ಯ ಮತ್ತು ಲಂಚದ ಕುರಿತ ಮಾಹಿತಿಯನ್ನು ಹೊಂದಿದ್ದಾನೆ. ನೋಡುವ ಮುಂದೇನಾಗುತ್ತೆ…. ಯಾಕೆಂದರೆ ಯಾವ ರಹಸ್ಯವೂ ಯಾವತ್ತೂ ರಹಸ್ಯವಾಗಿಯೇ ಉಳಿಯೋದಿಲ್ಲ ಎಂದು ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.

ಹಳೆ ಪ್ರಕರಣಗಳನ್ನು ಕೆದಕುತ್ತಿದ್ದಂತೆಯೇ ತಾಯಿ ಮಗ ಕೋರ್ಟ್ ಗೆ ಹೋಗಿದ್ದರು. ಈಗ ನೋಡುತ್ತೇನೆ ಹೇಗೆ ಬಚಾವ್ ಆಗುತ್ತಾರೆ ಅಂತ. ತಾವು ಮಾಡಿದ್ದೇ ಫೈನಲ್ ಎಂದು ಭಾವಿಸಿದ್ದಾರೆ. ಪ್ರತಿಯೊಂದು ಹಳೆಯ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

‘ಯುಪಿಎ ಅವಧಿಯ 3600 ಕೋಟಿ ರುಪಾಯಿ ಮೊತ್ತದ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್ ಅವರನ್ನು ಯುಎಇ ಭಾರತಕ್ಕೆ ಗಡಿಪಾರು ಮಾಡಿದ್ದು, ಸಿಬಿಐ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

Comments are closed.