ರಾಷ್ಟ್ರೀಯ

ಛತ್ತೀಸ್​ಗಢದ ಕಾಂಗ್ರೆಸ್ ನಾಯಕರಿಂದ ಗಂಗಾ ಜಲ ಹಿಡಿದು ಪ್ರತಿಜ್ಞೆ!

Pinterest LinkedIn Tumblr


ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಬಿಸಿ ಎಲ್ಲೆಡೆ ಹೆಚ್ಚಾಗುತ್ತಿದೆ. ಕೆಲವು ಪಕ್ಷಗಳಲ್ಲಿ ಬದಲಾವಣೆಯ ಹವಾ ಬೀಸುತ್ತಿದ್ದರೆ, ಇನ್ನು ಕೆಲವು ಪಕ್ಷಗಳು ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಲು ಮುಂದಾಗಿವೆ. ಹೌದು, ಛತ್ತೀಸ್​ಗಢದ ಕೆಲವು ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಆ ಸಮಯದಲ್ಲಿ ಎಲ್ಲರೂ ತಮ್ಮ ಕೈಯಲ್ಲಿ ಗಂಗಾ ಜಲವನ್ನು ತೆಗೆದುಕೊಂಡು ಪ್ರತಿಜ್ಞೆ ಮಾಡಿದರು.

ಮಾಜಿ ಕೇಂದ್ರ ಸಚಿವ ಆರ್.ಪಿ.ಎನ್ ಸಿಂಗ್ ಕಾಂಗ್ರೆಸ್ ನಾಯಕರೊಂದಿಗೆ ಗಂಗಾ-ಜಲವನ್ನು ಕೈಯಲ್ಲಿ ತೆಗೆದುಕೊಂಡು ಛತ್ತೀಸ್​ಗಢದಲ್ಲಿ ತಮ್ಮ ಸರಕಾರ ಬಂದರೆ ಕೇವಲ 10 ದಿನಗಳಲ್ಲಿ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಮುಂದುವರೆದು ಮಾತನಾಡುತ್ತಾ, ಆರ್.ಡಿ.ಎನ್ ಸಿಂಗ್ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನೀಡಿದ ಭರವಸೆಯನ್ನು ಪೂರೈಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ನಮ್ಮ ಪಕ್ಷ ಬಿಜೆಪಿ ಪಕ್ಷದಂತಲ್ಲ ಎಂದು ಹೇಳಿದರು.

ನವೆಂಬರ್ 12 ರಂದು ಛತ್ತೀಸ್​ಗಢದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಅದರಲ್ಲಿ 70% ಮತದಾನ ನಡೆದಿದೆ. ಮೊದಲ ಹಂತದಲ್ಲಿ ರಾಜ್ಯದ 18 ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸೆಮಿ ಫೈನಲ್ ಎಂದು ಪರಿಗಣಿಸಲಾಗಿದೆ.

Comments are closed.