ರಾಷ್ಟ್ರೀಯ

ಪಂಜಾಬ್ ನಲ್ಲಿ ಅನ್ಸರ್​ ಘಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಕಮಾಂಡರ್​ ಜಾಕೀರ್ ಮೂಸಾ ಪ್ರತ್ಯಕ್ಷ

Pinterest LinkedIn Tumblr

ಗುರುದಾಸ್ಪುರ: ಜಮ್ಮು ಮತ್ತು ಕಾಶ್ಮೀರದ ಅನ್ಸರ್​ ಘಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಕಮಾಂಡರ್​, ಭಯೋತ್ಪಾದಕ ಜಾಕೀರ್ ಮೂಸಾ ಪಂಜಾಬ್​ನ ಅಮೃತಸರದ ಬಳಿ ಕಾಣಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್​ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಈ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಹಾಕಿ ಎಚ್ಚರಿಕೆ ನೀಡಿರುವ ಪಂಜಾಬ್ ಪೊಲೀಸರು ಈ ಉಗ್ರರ ಬಗ್ಗೆ ಮಾಹಿತಿ ದೊರೆತಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಮೂಸಾ ಜೈಷ್ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ 7 ಉಗ್ರರೊಂದಿಗೆ ಶುಕ್ರವಾರ ಪಂಜಾಬ್​ನಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುಪ್ತಚರ ಮಾಹಿತಿ ಪ್ರಕಾರ ಈತ ಜೈಷ್ ಉಗ್ರರ ಜತೆ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್​ನಿಂದ ಹೊರ ಹೋಗುವ ದಾರಿಗಳು ಮತ್ತು ದೆಹಲಿಗೆ ಪ್ರವೇಶ ಒದಗಿಸುವ ದಾರಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಈ ಮಾರ್ಗವಾಗಿ ಸಂಚರಿಸುವ ಎಲ್ಲಾ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸ್​ನ ಡಿಜಿಪಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Comments are closed.