ರಾಷ್ಟ್ರೀಯ

ಶಬರಿಮಲೆ ಮಹಿಳೆಯರ ಪ್ರವೇಶ ವಿವಾದ: ಮುಖ್ಯಮಂತ್ರಿ ಪಿಣರಾಯ್ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆ ವಿಫಲ

Pinterest LinkedIn Tumblr

ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಾಳೆಯಿಂದ ಮಂಡಲ ವಿಳಕ್ಕು ಮಹೋತ್ಸವ ಆರಂಭವಾಗಲಿದ್ದು, ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅನುಷ್ಠಾನದ ಕಗ್ಗಂಟು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದಲ್ಲಿ ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಒಮ್ಮತ ಮೂಡದೇ ವಿಫಲವಾಗಿದೆ.

ಪ್ರತಿಪಕ್ಷ ಯುಡಿಎಫ್ ಸಭೆಯನ್ನು ಬಹಿಷ್ಕರಿಸಿತು. ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸದೆ ಇರಲು ಸರ್ಕಾರ ಸಿದ್ಧವಿಲ್ಲ ಎಂದು ಪಿಣರಾಯ್ ವಿಜಯನ್ ಪಿಣರಾಯ್ ಪುನರುಚ್ಚಸಿದರು. ಸರ್ಕಾರದ ನಿಲುವನ್ನು ಬಿಜೆಪಿ ಟೀಕಿಸಿತು.

ಸಭೆಯಿಂದ ಹೊರಗೆ ಬಂದು ಮಾತನಾಡಿದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲಾ, ಶಬರಿಮಲೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರಕ್ಕೆ ಇದು ದೊಡ್ಡ ಅವಕಾಶವಾಗಿದೆ. ಆದರೆ, ಸರ್ಕಾರ ಹಠ ಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಬಿಜೆಪಿ ಹಾಗೂ ಆರ್ ಎಸ್ ಎಸ್ ಬೆಂಬಲಿಸುತ್ತಿದೆ. ಸರ್ವ ಪಕ್ಷ ಸಭೆ ಕೇವಲ ಪ್ರಹಸನವಾಗಿದ್ದು, ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಏನಾದರೂ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಚೆನ್ನಿತಾಲ ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪಿ ಎಸ್ ಶ್ರೀಧರನ್, ಸರ್ವಪಕ್ಷ ಸಭೆ ಸಿಪಿಎಂ ಕೇಂದ್ರ ಕಚೇರಿಯಲ್ಲಿ ರಚಿಸಿರುವ ನಾಟಕವಾಗಿದೆ. ಕೇರಳ ಸ್ಟಾಲಿನ್ ಅವರ ರಷ್ಯಾ ಅಲ್ಲ ಎಂಬುದನ್ನು ತೋರಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ . ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ಹಿನ್ನೆಲೆಯಲ್ಲಿ ಸರ್ಕಾರ ಬೇರೆ ನಿಲುವು ತಾಳುವುದಿಲ್ಲ. ಸಂವಿಧಾನದಿಂದ ನೀಡಲ್ಪಟ್ಟಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಸಾಧ್ಯವಿಲ್ಲ ಎಂದು ಹೇಳಿದರು.

ಮಹಿಳೆಯರಿಗೆ ಪ್ರತ್ಯೇಕ ದಿನಗಳಲ್ಲಿ ಶಬರಿಮಲೆಗೆ ತೆರಳಲು ಅವಕಾಶ ಕೊಡುವಂತೆ ಹೇಳುತ್ತಿದ್ದರೂ ಪ್ರತಿಪಕ್ಷಗಳು ಕೇಳುತ್ತಿಲ್ಲ. ಸರ್ಕಾರ ಭಕ್ತಾಧಿಗಳೊಂದಿಗೆ ಇದ್ದು, ಎಲ್ಲಾ ರಕ್ಷಣೆ ನೀಡಲಾಗುವುದು ಎಂದು ಪಿಣರಾಯ್ ತಿಳಿಸಿದರು.

Comments are closed.