ರಾಷ್ಟ್ರೀಯ

ಪೆಟ್ರೋಲ್- ಡೀಸೆಲ್ ದರದಲ್ಲಿ ಇಂದು ಎಷ್ಟು ಇಳಿಕೆ ಆಗಿದೆ ನೋಡಿ….

Pinterest LinkedIn Tumblr

ಮುಂಬೈ: ನಿರಂತರವಾಗಿ ಏರಿಕೆಯಾಗಿ ಈಗ ಸತತ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಗುರುವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಮತ್ತೆ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ಇಂದು ಪೆಟ್ರೋಲ್ ದರಲ್ಲಿ 15 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ 10 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 77.28ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 72.09 ಕ್ಕೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪೆಟ್ರೋಲ್ ದರದಲ್ಲಿ 14ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 11 ಪೈಸೆಯಷ್ಟು ಇಳಿಕೆಯಾಗಿದೆ. ಆ ಮೂಲಕ ಪ್ರತೀ ಲೀಟರ್ ಪೆಟ್ರೋಲ್ ದರ 82.80 ರೂಗಳಿಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 11 ಪೈಸೆಯಷ್ಟು ಕಡಿಮೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 75.53ಕ್ಕೆ ಇಳಿಕೆಯಾಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 77.90 ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 72.48 ರೂಗೆ ಇಳಿಕೆಯಾಗಿದೆ. ಈ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದೆ.

ಉಚಿತ ಎಸ್ಎಂಎಸ್ ಮಾಡಿ, ತೈಲೋತ್ಪನ್ನಗಳ ದರ ತಿಳಿಯಿರಿ
ಇನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಗ್ರಾಹಕರು ಎಸ್ಎಂಎಸ್ ಕಳುಹಿಸುವ ಮೂಲಕ ಆಯಾ ನಗರದಲ್ಲಿನ ದರಗಳ ಮಾಹಿತಿ ಪಡೆಯಬಹುದು. ಈ ಬಗ್ಗೆ ಸಂಸ್ಥೆ ತನ್ನ ವೆಬೈ ಸೈಟ್ ನಲ್ಲಿ ಮಾಹಿತಿ ನೀಡಿದ್ದು, ಗ್ರಾಹಕರು https://www.iocl.com/Products/PetrolDieselPrices.aspx ಗೆ ಭೇಟಿ 92249 92249 ನಂಬರ್ ಗೆ ಆಯಾ ಜಿಲ್ಲೆಯ ಕೋಡ್ ಅನ್ನು ಎಸ್ಎಂಎಸ್ ಮಾಡಿ ದರಗಳ ಮಾಹಿತಿ ಪಡೆಯಬಹುದು.

Comments are closed.