ರಾಷ್ಟ್ರೀಯ

ಪಂಜಾಬಿನ ಹಾಲ್ ಕಲನ್ ಗ್ರಾಮದಲ್ಲಿ ನಡೆದ ಗೋಲಿಬಾರ್ ಪ್ರಕರಣ: ಪಂಜಾಬ್ ಮಾಜಿ ಮುಖ್ಯಮಂತ್ರಿ ಬಾದಲ್, ಪುತ್ರ ಸುಖಬೀರ್, ನಟ ಅಕ್ಷಯ್ ಗೆ ಸಮನ್ಸ್

Pinterest LinkedIn Tumblr

ನವದೆಹಲಿ: ಪಂಜಾಬಿನ ಫರೀದ್ಕೋಟ್ ಜಿಲ್ಲೆ ಹಾಲ್ ಕಲನ್ ಗ್ರಾಮದಲ್ಲಿ 2015ರಲ್ಲಿ ನಡೆದಿದ್ದ ಪೋಲೀಸ್ ಗೋಲಿಬಾರ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಪಂಜಾಬಿನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್ ಮತ್ತು ನಟ ಅಕ್ಷಯ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ನವೆಂಬರ್ 16 ರಂದು ಇನ್ಸ್ಪೆಕ್ಟರ್ ಜನರಲ್ ಕುನ್ವಾರ್ ವಿಜಯ್ ಪ್ರತಾಪ್ ಸಿಂಗ್ ನೇತೃತ್ವದ ಎಸ್ ಐಟಿ ಮುಂದೆ ಹಾಜರಾಗಲು ಬಾದಲ್ ಅವರಿಗೆ ಸೂಚಿಸಲಾಗಿದೆ.ನವೆಂಬರ್ 19 ರಂದು ಸುಖಬೀರ್ ಹಾಗೂ ನವೆಂಬರ್ 21 ರಂದು ಅಮೃತಸರ್ ನ ಸರ್ಕ್ಯೂಟ್ ಹೌಸ್ ಗೆ ಅಕ್ಷಯ್ ಅವರಿಗೆ ಬರುವಂತೆ ಸೂಚಿಸಲಾಗಿದೆ.

ಎಸ್ ಐಟಿ ಮೂವರಿಗೂ ಪ್ರತ್ಯೇಕ ಸಮಸ್ನ್ ಜಾರಿಗೊಳಿಸಿದ್ದಾಗಿ ಅಧಿಕೃತ ಮೂಲಗಳಿಂದ ಮಾಹಿತಿ ಲಭಿಸಿದೆ. “ಕಾನೂನು ಎಲ್ಲರಿಗೂ ಸಮಾನವಾಗಿದೆ ಮತ್ತು ನಮ್ಮ ತನಿಖೆ ಸಂಪೂರ್ಣವಾಗಿ ನ್ಯಾಯೋಚಿತ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿರುತ್ತದೆ” ಎಂದುಐಜಿ ಅವರು ಹೇಳಿದ್ದಾರೆ.

ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಭ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಫರೀದ್ಕೋಟ್ ಜಿಲ್ಲೆ ಹಾಲ್ ಕಲನ್ ಗ್ರಾಮದಲ್ಲಿ ಸಿಖ್ಖ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೋಲೀಸರು ಗೋಲಿಬಾರ್ ನಡೆಸಿದ್ದರು.ಕೊಟ್ಟಪುರ ಹಾಗೂ ಹಾಲ್ ಕಲನ್ ಗ್ರಾಮಗಳಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು.

ಇದಕ್ಕೆ ಮುನ್ನ ನ್ಯಾಯಮೂರ್ತಿ ರಂಜಿತ್ ಸಿಂಗ್ ಕಮಿಷನ್ ವರದಿಯಲ್ಲಿ ನಟ ಹೆಸರನ್ನು ಉಲ್ಲೇಖಿಸಲಾಗಿತ್ತು. ವರದಿಯ ಪ್ರಕಾರ, ಮಾಜಿ ಉಪಮುಖ್ಯಮಂತ್ರಿ ಸುಖ್ಬಿರ್ ಮತ್ತು ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವ ಚಲನಚಿತ್ರ ‘ಎಂಎಸ್ಜಿ’ ಬಿಡುಗಡೆಗೆ ಸಂಬಂಧಿಸಿದಂತೆ ಮುಂಬೈಯ ಅಕ್ಷಯ್ ಕುಮಾರ್ ಫ್ಲ್ಯಾಟ್ ಗಳಲ್ಲಿ ಸಭೆ ನಡೆದಿತ್ತು.

ಧರ್ಮ ನಿಂದನೆ ಸಂಬಂಧ ಗುರ್ಮಿತ್ ಸಿಂಗ್ ಅವರಿಗೆ ಕ್ಷಮಾದಾನ ಸಿಗುವುದಕ್ಕೆ ಮುನ್ನ ಅಕ್ಷಯ್ ಮನೆಯಲ್ಲಿ ಸಭೆ ನಡೆದಿತ್ತು.ಹಾಗಾಗಿಯೂ ಅಕ್ಷಯ್ ತಮ್ಮ ಮೇಲಿನ ಎಲ್ಲಾ ಆರೋಪವನ್ನು ನಿರಾಕರಿಸಿದ್ದರು.

Comments are closed.