
ಮುಂಬೈ: ತನ್ನ ಎರಡೂವರೆ ವರ್ಷದ ತಮ್ಮನನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಅಪಹರಣಕಾರರ ಹತ್ತು ವರ್ಷದ ಬಾಲಕನೊಬ್ಬ ಬೆನ್ನಟ್ಟಿ ಹಿಡಿದು ತಮ್ಮನ ರಕ್ಷಣೆ ಮಾಡಿದ ಘತಾನೆ ಮುಂಬೈನಲ್ಲಿ ನಡೆದಿದೆ.
ಮುಂಬ್ರಾದ ಜರಿನಾ ಅಪಾರ್ಟ್‌ಮೆಂಟ್‌ನ ಸಂಬಂಧಿಕರ ಮನೆಗೆ ಆಗಮಿಸಿದ್ದ ಸೋದರರು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬುರ್ಖಾ ಧರಿಸಿದ ಮಹಿಳೆಯು ಚಿಕ್ಕ ಬಾಲಕನನ್ನು ಸೆಳೆದು ಎತ್ತಿಕೊಂಡದ್ದಲ್ಲದೆ ಪರಾರಿಯಾಗಲು ಪ್ರಯತ್ನಿಸಿದ್ದಾಳೆ.
ಚಿಕ್ಕಪ್ಪನ ಮದುವೆಗಾಗಿ ಆಗಮಿಸಿದ್ದಾಗ ಈ ಘಟನೆ ನಡೆದಿದ್ದು ಈ ವೇಳೆ ಮೂವರು ಬಾಲಕರ ಹೊರತಾಗಿ ಉಳಿದೆಲ್ಲರೂ ಮನೆಯ ಒಳಗಿದ್ದರು ಎನ್ನಲಾಗಿದೆ. ಮೊದಲಿಗೆ ಆಗಮಿಸಿದ ಬುರ್ಖಾ ಧಾರಿಣಿ ಚಿಎರಡೂವರೆ ವರ್ಷದ ಬಾಲಕನನ್ನು ಸಲಿಗೆಯಿಂದ ಮಾತನಾಡಿಸಿ ತನ್ನತ್ತ ಆಕರ್ಷಿಸಿದ್ದಾಳೆ. ಬಳಿಕ ಅವನನ್ನು ಎತ್ತಿಕೊಂಡು ಪರಾರಿಯಾಗುವುದಕ್ಕೆ ಪ್ರಯತ್ನಿಸಿದ್ದಾಳೆ.
ತಕ್ಷಣ ಅದೇ ಸ್ಥಳದಲ್ಲಿದ್ದ ಆ ಮಗುವಿನ ಅಣ್ಣ ಮಹಿಳೆಯನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ ಆಕೆ ಮಗುವಿಗೆ ಚಾಕಲೇಟ್ ಕೊಡಿಸಲು ಎತ್ತಿಕೊಂಡು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾಳೆ. ಆದರೆ ಅನುಮಾನಗೊಂಡ ಆತ ಆಕೆಯನ್ನು ಹಿಂಬಾಲಿಸಿದ್ದಾನೆ.
ಆಕೆಯನ್ನು ಬೆನ್ನಟ್ಟಿ ತಮ್ಮನನ್ನು ರಕ್ಷಿಸಿದ್ದಾನೆ. ಬಾಲಕ ಮಹಿಳೆಯ ಬೆನ್ನಟ್ಟಿ ಹೋಗುತ್ತಿರಿವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಗಾಗಿ ಶೋಧ ನಡೆಸಿದ್ದಾರೆ.
Comments are closed.