ರಾಷ್ಟ್ರೀಯ

ಎಷ್ಟು ಜನ ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಆನ್​ಲೈನ್​ ನೋಂದಣಿ ಮಾಡಿಕೊಂಡಿದ್ದಾರೆ ಗೊತ್ತಾ?

Pinterest LinkedIn Tumblr


ತಿರುವನಂತಪುರಂ: ಶಬರಿಮಲೆ ದೇಗುಲದ ಪ್ರವೇಶಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದೇ ನೀಡಿದ್ದು ದೇಶದಲ್ಲಿ ದೊಡ್ಡ ಗಲಾಟೆಯೇ ಎದ್ದುಬಿಟ್ಟಿತು.

ಕಳೆದ ತಿಂಗಳು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆದಿದ್ದು, ಮಹಿಳೆಯರು ಒಳ ಪ್ರವೇಶಿಸಿದಂತೆ ಹಿಂದು ಕಾರ್ಯಕರ್ತರು ತಡೆಯಲು ಹೋಗಿ ಗಲಭೆ ಸೃಷ್ಟಿಸಿದ ಘಟನೆ ನಡೆದಿತ್ತು. ಇದರಿಂದಾಗಿ ಪೊಲೀಸ್​ ಬಿಗಿ ಭದ್ರತೆಯಲ್ಲಿ ಶಬರಿಮಲೆಯಲ್ಲಿ ಪೂಜೆ ನೆರವೇರಿಸಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಅಷ್ಟೆಲ್ಲ ಗಲಾಟೆಯಾದರೂ, ಸುಪ್ರೀಂಕೋರ್ಟೇ ತೀರ್ಪು ನೀಡಿದ್ದರೂ ಯಾವ ಮಹಿಳೆಗೂ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ.

ಈ ತಿಂಗಳು ಕೂಡ ಮುಂದಿನ ವಾರದಿಂದ ಶಬರಿಮಲೆಯಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಇದಕ್ಕಾಗಿ ತಮಗೆ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸುವಂತೆ 550ಕ್ಕೂ ಹೆಚ್ಚು 10ರಿಂದ 50 ವರ್ಷದೊಳಗಿನ ಮಹಿಳೆಯರು ಆನ್​ಲೈನ್​ ಮೂಲಕ ಹೆಸರು ನೋಂದಾಯಿಸಿಕೊಂಡಿರುವುದು ವಿಶೇಷ. ಕಳೆದ ತಿಂಗಳು ಯಾರೊಬ್ಬ ಮಹಿಳೆಗೂ ಒಳಪ್ರವೇಶಿಸಲು ಅವಕಾಶ ಸಿಗದಿದ್ದರೂ ಆನ್​ಲೈನ್​ ಮೂಲಕ ನೋಂದಣಿ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆಯೇನೂ ಕಡಿಮೆಯಿಲ್ಲ.

ಪ್ರತಿ ವರ್ಷವೂ ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಅನುಕೂಲವಾಗಲೆಂದು ಕೇರಳ ಪೋಲೀಸರು ಆನ್ ಲೈನ್ ಮೂಲಕ ಬುಕ್​ ಮಾಡಲು ಅವಕಾಶ ನೀಡುತ್ತಾರೆ. ಈ ವರ್ಷವೂ ಆ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ದೇವರ ದರ್ಶನಕ್ಕೆ ದಿನ ನಿಗದಿ ಮಾಡಿಕೊಂಡು ಮುಂಚಿತವಾಗಿ ಬುಕ್ ಮಾಡಿಕೊಳ್ಳುತ್ತಾರೆ. ಇದರಲ್ಲಿ ಇದೇ ಮೊದಲ ಬಾರಿಗೆ 550 ಮಹಿಳೆಯರ ಹೆಸರು ಕೂಡ ದಾಖಲಾಗಿದೆ. ಹೀಗಾಗಿ, ಆನ್​ಲೈನ್​ನಲ್ಲಿ ಬುಕ್​ ಮಾಡಿಕೊಂಡ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಸಿಗುತ್ತದಾ? ಇಲ್ಲವಾ? ಎಂಬ ಪ್ರರ್ಶನೆ ಉದ್ಭವವಾಗಿದೆ.

Comments are closed.