
ನವದೆಹಲಿ: ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಸಾಗಿ ಗ್ರಾಹಕರು ಮತ್ತು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಇಂಧನ ಬೆಲೆಯು ಸತತ ಇಳಿಕೆ ಕಾಣುತ್ತಿದ್ದು, ಗ್ರಾಹಕರ ಜೇಬಿಗೆ ರಿಲೀಫ್ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಬೆಲೆ ಇಳಿಕೆಯಾಗಿದೆ. ಲೀಟರ್ ಪೆಟ್ರೋಲ್‌ಗೆ 17 ಪೈಸೆ ಕಡಿಮೆಯಾಗಿ 77.72 ರೂ.ಗಳಷ್ಟಾಗಿದ್ದು, ಡೀಸೆಲ್‌ಗೆ 16 ಪೈಸೆ ಕಡಿಮೆಯಾಗಿ 72.58 ರೂ.ಗೆ ಮಾರಾಟವಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು, ಲೀಟರ್ ಪೆಟ್ರೋಲ್‌ಗೆ 36 ಪೈಸೆ ಕಡಿಮೆಯಾಗುವ ಮೂಲಕ 78.69 ರೂ. ಮತ್ತು ಡೀಸೆಲ್‌ಗೆ 73.13ರೂ.ಗಳಷ್ಟಿದ್ದು, 33 ಪೈಸೆ ಕಡಿಮೆಯಾಗಿದೆ.
ಮುಂಬೈನಲ್ಲೂ ಕೂಡ ಬೆಲೆ ಇಳಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ಗೆ 17 ಪೈಸೆ ಕಡಿತಗೊಂಡು 83.40 ಮತ್ತು 76.05 ರೂ.ಗಳಷ್ಟಿದೆ. ದೇಶದಲ್ಲೇ ಅತಿಹೆಚ್ಚು ಬೆಲೆ ಏರಿಕೆ ಕಂಡಿದ್ದ ಮುಂಬೈನಲ್ಲಿ ಇದೀಗ ನಿರಂತರ ಬೆಲೆ ಇಳಿಕೆಯಾಗುತ್ತಿದೆ. ಕಳೆದ ಮೂರು ವಾರಗಳಿಂದಲೂ ಪೈಸೆಗಳಲ್ಲಿ ಸತತ ಇಳಿಕೆ ಕಾಣುತ್ತಲೇ ಸಾಗಿದೆ.
Comments are closed.