ರಾಷ್ಟ್ರೀಯ

ಪೆಟ್ರೋಲ್​ ದರ 21 ಪೈಸೆ ಹಾಗೂ ಡೀಸೆಲ್ ದರ 17 ಪೈಸೆ ಇಳಿಕೆ

Pinterest LinkedIn Tumblr

ನವದೆಹಲಿ : ಕೆಲವು ತಿಂಗಳುಗಳ ಹಿಂದೆ ಇಂಧನ ದರ ದಿನದಿಂದ ದಿನಕ್ಕೆ ಏರಿದಂತೆ ಕಳೆದ ಕೆಲವು ದಿನಗಳಿಂದ ಅಷ್ಟೇ ವೇಗವಾಗಿ ಇಳಿಮುಖವಾಗುತ್ತಿದೆ. ಕಳೆದ 18 ದಿನಗಳಲ್ಲಿ ಪೆಟ್ರೋಲ್ ದರ 4.05 ರೂ. ಹಾಗೂ ಡೀಸೆಲ್​ ದರದಲ್ಲಿ 2.33 ರೂ. ಇಳಿಕೆಯಾಗಿದೆ.

ಭಾನುವಾರ ಪೆಟ್ರೋಲ್​ ದರ 21 ಪೈಸೆ ಹಾಗೂ ಡೀಸೆಲ್ ದರ 17 ಪೈಸೆ ಇಳಿಕೆಯಾಗಿದೆ. ಪ್ರಸ್ತುತ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ಗೆ 78.78 ರೂ. ಹಾಗೂ ಡೀಸೆಲ್​ಗೆ 73.36 ರೂ. ಇಳಿಕೆಯಾಗಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ಗೆ 82.28 ರೂ., ಡೀಸೆಲ್​ಗೆ 76.88 ರೂಪಾಯಿ ಇದೆ. ರಿಟೈಲ್​ ದರದಲ್ಲಿ ಕಳೆದ ಅಕ್ಟೋಬರ್ 18ರಿಂದ ಇಂಧನ ತೈಲ ದರದಲ್ಲಿ ಇಳಿಕೆ ಆರಂಭವಾಗಿದೆ.

ಆಕ್ಟೋಬರ್​ 4ರಂದು ಪೆಟ್ರೋಲ್​ ದರ ದೆಹಲಿಯಲ್ಲಿ 84 ರೂ. ಹಾಗೂ ಮುಂಬೈನಲ್ಲಿ 91.34 ರೂ. ದಾಟಿತ್ತು. ಡೀಸೆಲ್​ಗೆ 75.45 ಹಾಗೂ 80.10 ರೂ. ಆಗಿತ್ತು. ಆಗಸ್ಟ್ 16ರ ನಂತರ ತೈಲ ದರ ಏರಿಕೆ ಆರಂಭವಾಗಿತ್ತು.

ಆಗಸ್ಟ್​ 15ರಲ್ಲಿ ಪೆಟ್ರೋಲ್​ ದರ ದೆಹಲಿಯಲ್ಲಿ ಲೀಟರ್​ಗೆ 77.14 ರೂ. ಹಾಗೂ ಮುಂಬೈನಲ್ಲಿ 84.58 ರೂ, ಇತ್ತು. ಅದೇ ದಿನ ದೆಹಲಿಯಲ್ಲಿ ಡೀಸೆಲ್​ ದರ ಲೀಟರ್​ಗೆ 68.72 ಹಾಗೂ ಮುಂಬೈನಲ್ಲಿ 72.96 ರೂ. ಇತ್ತು. ಆಗಸ್ಟ್​ 16ರಿಂದ ಅಕ್ಟೋಬರ್​ 4 ರವರೆಗೆ ಪೆಟ್ರೋಲ್ ದರದಲ್ಲಿ ಬರೋಬ್ಬರಿ 6.86 ರೂ. ಡೀಸೆಲ್​ಗೆ 6.73 ರೂ. ಏರಿಕೆಯಾಗಿತ್ತು.

ಇಂಧನ ತೈಲ ದರ ಏರಿಕೆ ಖಂಡಿಸಿ, ಕಾಂಗ್ರೆಸ್​ ದೇಶವ್ಯಾಪಿ ಪ್ರತಿಭಟನೆಯನ್ನು ಕೈಗೊಂಡಿತ್ತು. ಆನಂತರ ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಮೇಲಿನ ಅಬಕಾರಿ ಸುಂಕದ ಮೇಲೆ 1.50 ರೂ. ಇಳಿಕೆ ಮಾಡಿತ್ತು. ರಾಜ್ಯ ಸರ್ಕಾರಗಳು ಕೂಡ ಇಂಧನದ ಮೇಲೆ ಸಬ್ಸಿಡಿ ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ಹಲವು ರಾಜ್ಯ ಸರ್ಕಾರಗಳು ಲೀಟರ್​ಗೆ 1 ರೂ. ಇಳಿಕೆ ಮಾಡಿದ್ದವು.

Comments are closed.