ರಾಷ್ಟ್ರೀಯ

ಪಟೇಲ್ ಅವರ ಏಕತೆಯ ವಿಗ್ರಹಕ್ಕಿಂತಲೂ ರಾಮನ ವಿಗ್ರಹ ಎತ್ತರವಿರಬೇಕು: ಆಜಂ ಖಾನ್

Pinterest LinkedIn Tumblr

ರಾಮ್ ಪುರ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ರಾಮನ 151 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದ್ದು ಸರ್ಕಾರದ ನಡೆಯನ್ನು ಎಸ್ ಪಿ ನಾಯಕ ಆಜಂ ಖಾನ್ ಸ್ವಾಗತಿಸಿದ್ದಾರೆ.

ಅಯೋಧ್ಯೆಯ ಸರಯೂ ನದಿ ತೀರದಲ್ಲಿ ರಾಮನ ಪ್ರತಿಮೆ ನಿರ್ಮಿಸುವುದನ್ನು ಸ್ವಾಗತಿಸಿರುವ ಆಜಂ ಖಾನ್, ಇತ್ತೀಚೆಗಷ್ಟೇ ಉದ್ಘಾಟನೆಯಾದ 182 ಮೀಟರ್ ಇರುವ ಸರ್ದಾರ್ ಪಟೇಲ್ ಅವರ ಏಕತೆಯ ವಿಗ್ರಹಕ್ಕಿಂತಲೂ ರಾಮನ ವಿಗ್ರಹ ಎತ್ತರವಿರಬೇಕು ಎಂದು ಹೇಳಿದ್ದಾರೆ. ರಾಮನ ಪ್ರತಿಮೆಯನ್ನು ನಿರ್ಮಿಸುವುದಕ್ಕೆ ಯಾರೂ ವಿರೋಧಿಸುವುದಿಲ್ಲ, ಸರ್ದಾರ್ ಪಟೇಲ್ ಅವರ ಪ್ರತಿಮೆಗಿಂತಲೂ ರಾಮನ ಪ್ರತಿಮೆಯೇ ದೊಡ್ದದಾಗಿರಲಿ ಎಂದು ಆಜಂ ಖಾನ್ ಹೇಳಿದ್ದಾರೆ.

ದೀಪಾವಳಿ ವೇಳೆಗೆ ಸರಯೂ ನದಿ ತೀರದಲ್ಲಿ ರಾಮನ 151 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಯೋಜನೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಘೋಷಿಸುವ ಸಾಧ್ಯತೆ ಇದೆ.

Comments are closed.