ರಾಷ್ಟ್ರೀಯ

ಮತ್ತೊಬ್ಬ ಪತ್ರಕರ್ತೆಯಿಂದ ಅತ್ಯಾಚಾರ ಆರೋಪ, ನಮ್ಮದು ಒಮ್ಮತದ ಸಂಬಂಧ: ಎಂಜೆ ಅಕ್ಬರ್‌

Pinterest LinkedIn Tumblr


ಹೊಸದಿಲ್ಲಿ: ಮಾಜಿ ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ಮೀ ಟೂ ಸುಳಿಯಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾಗಿದ್ದಾರೆ.

ಈಗ ಮತ್ತೊಬ್ಬ ಮಾಜಿ ಪತ್ರಕರ್ತೆ, ಎಂಜೆ ಅಕ್ಬರ್‌ ವಿರುದ್ಧ ಆರೋಪ ಮಾಡಿದ್ದು, ಈ ಹಿಂದೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ದೂರಿದಿದ್ದಾರೆ.

ಪಲ್ಲವಿ ಗೊಗೊಯಿ ಎಂಬುವರು ಈ ಸಂಬಂಧ ಆರೋಪ ಮಾಡಿದ್ದಾರೆ.

ಆದರೆ ಈ ಆರೋಪವನ್ನು ಎಂಜೆ ಅಕ್ಬರ್‌ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ, ಅಲ್ಲದೇ ನಮ್ಮಿಬ್ಬರದು ಒಮ್ಮತದ ಸಂಬಂಧವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ನಿ ಮಲ್ಲಿಕಾ ಅಕ್ಬರ್‌ ಕೂಡ ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

ಇಷ್ಟು ನಾನು ಸೈಲೆಂಟ್‌ ಆಗಿದ್ದೆ. ಆದರೆ ಮೀ ಟೂ ಆಂದೋಲನದ ಹೆಸರಿನಲ್ಲಿ ನನ್ನ ಪತಿ ಎಂ.ಜೆ. ಅಕ್ಬರ್‌ ವಿರುದ್ಧ ಹಲವಾರು ಆರೋಪಗಳನ್ನು ಮಾಡಲಾಗುತ್ತಿದೆ. ಪಲ್ಲವಿ ಗೊಗೊಯಿ ಎಂಬುವರು ಮಾಡಿರುವ ಆರೋಪ ಶುದ್ಧ ಸುಳ್ಳು ಎಂದಿದ್ದಾರೆ.

ಈ ಕುರಿತು ಮಲ್ಲಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.

ಎಂಜೆ ಅಕ್ಬರ್‌ ಏಷ್ಯನ್‌ ಏಜ್‌ನಲ್ಲಿದ್ದಾಗ ಕೆಲವೊಮ್ಮೆ ನಮ್ಮ ಮನೆಯಲ್ಲಿ ಪಾರ್ಟಿ ನಡೆಯುತ್ತಿತ್ತು. ಒಮ್ಮೆ ಪಾರ್ಟಿ ವೇಳೆ ಇಬ್ಬರೂ ಕ್ಲೋಸ್‌ ಆಗಿ ನೃತ್ಯ ಮಾಡುತ್ತಿದ್ದರು. ಕೆಲವೊಮ್ಮೆ ಮನೆಗೂ ಬಂದು ಹೋಗುತ್ತಿದ್ದರು. ಇದರಿಂದ ನನಗೆ ಮುಜುಗರವಾಗುತ್ತಿತ್ತು. ಈ ಬಗ್ಗೆ ಅಕ್ಬರ್‌ ಜತೆ ಮಾತನಾಡಿದ್ದೆ. ಅಂದಿನಿಂದಲೇ ಅವರು ಅಂತರ ಕಾಯ್ಡುಕೊಂಡರು ಎಂದು ಪತ್ನಿ ಮಲ್ಲಿಕಾ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಎಂಜೆ ಅಕ್ಬರ್‌ ಕೂಡ ಪ್ರತಿಕ್ರಿಯಿಸಿದ್ದು, ಪಲ್ಲವಿ ಗೊಗೊಯಿ ಮತ್ತು ನಾನು ಕೆಲವು ತಿಂಗಳುಗಳ ಕಾಲ ಒಮ್ಮತದ ಸಂಬಂಧ ಹೊಂದಿದ್ದೆವು. ಆದರೆ ಇದರಿಂದ ವೈಯಕ್ತಿಕವಾಗಿ ತೊಂದರೆ ಆದಾಗ ದೂರಾದೆವು ಎಂದು ಹೇಳಿದ್ದಾರೆ.

ಮೀ ಟೂ ಅಭಿಯಾನದ ಆರಂಭದ ಬೆನ್ನಲ್ಲೇ ಎಂಜೆ ಅಕ್ಬರ್‌ ವಿರುದ್ಧ ಅವರ ಮಾಜಿ ಸಹೋದ್ಯೋಗಿಗಳು ಆರೋಪಗಳ ಸುರಿಮಳೆಗರೆದಿದ್ದರು. ಅಕ್ಬರ್‌ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು 15ಕ್ಕೂ ಹೆಚ್ಚು ಮಹಿಳೆಯರು ಆಪಾದಿಸಿದ್ದರು.

ಈ ಹಿನ್ನೆಲೆಯಲ್ಲಿ ಎಂಜೆ ಅಕ್ಬರ್‌ ಕಳೆದ ತಿಂಗಳು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Comments are closed.