ರಾಷ್ಟ್ರೀಯ

ಸಂಪೂರ್ಣ ಸ್ವದೇಶಿ ನಿರ್ಮಾಣದ ಇಂಜಿನ್ ರಹಿತ ಟ್ರೇನ್ 18ರ ವಿಶೇಷತೆಗಳೇನು?

Pinterest LinkedIn Tumblr


ಹೊಸದಿಲ್ಲಿ: ಸಂಪೂರ್ಣ ಸ್ವದೇಶಿ ನಿರ್ಮಾಣದ ಇಂಜಿನ್ ರಹಿತ ಟ್ರೇನ್ 18 ಪರೀಕ್ಷಾರ್ಥ ಚಾಲನೆಗೆ ಅನುವಾಗುತ್ತಿದೆ. ನೋಡಲು ಬುಲೆಟ್ ಟ್ರೇನ್‌ನಂತಿರುವ ಟ್ರೇನ್ 18 ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ದೇಶದ ರೈಲು ಯಾನದಲ್ಲಿ ಹೊಸ ಗುರುತಾಗಲಿದೆ.

ಟ್ರೇನ್ 18 ನಿರ್ಮಾಣ, ವಿನ್ಯಾಸ ಪೂರ್ಣವಾಗಿ ಸ್ವದೇಶಿ ಆಗಿದ್ದು, ಚೆನ್ನೈನ ಅಂತರ್ಗತ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಂಡಿದೆ.

16 ಕೋಚ್‌ಗಳ ಟ್ರೇನ್ 18 ನಿರ್ಮಾಣಕ್ಕೆ 18 ತಿಂಗಳ ಸಮಯಾವಕಾಶ ತಗುಲಿದೆ. ದೇಶದಲ್ಲಿ ಪ್ರಸ್ತುತ ಇರುವ ರೈಲುಗಳಲ್ಲಿ ಟ್ರೇನ್ 18 ಹೆಚ್ಚು ವೇಗ ಹೊಂದಿರುವ ರೈಲು ಆಗಿದ್ದು, ಗಂಟೆಗೆ 220 ಕಿಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದರೂ, ಪ್ರಸ್ತುತ 160 ಕಿಮೀ. ವೇಗದಲ್ಲಿ ಚಲಾಯಿಸಿ ಪರೀಕ್ಷಿಸಲಾಗುತ್ತದೆ.

ಟ್ರೇನ್ 18
ಕಡಿಮೆ ಇಂಧನ ಬಳಕೆ, ವೈ-ಫೈ ಸೌಲಭ್ಯ, 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಒಟ್ಟು 1,128 ಆಸನ ವ್ಯವಸ್ಥೆ ಹೊಂದಿದೆ. ಆರಾಮದಾಯಕ ಸವಾರಿಗೆ ಹೆಚ್ಚು ಪ್ರಾಶಸ್ತ್ಯ ಕಲ್ಪಿಸಲಾಗಿದ್ದು, ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಕ್ಕೆ ಹೋಲಿಸಿದರೆ ಶೇ. 15 ಪ್ರಯಾಣದ ಅವಧಿ ಉಳಿತಾಯವಾಗಲಿದೆ.

ಏಪ್ರಿಲ್ 2020 ವೇಳೆಗೆ ಒಟ್ಟು 5 ರೈಲುಗಳು ಸಿದ್ದವಾಗಿ ರೈಲ್ವೆಗೆ ಸೇರ್ಪಡೆಯಾಗಲಿವೆ.

Comments are closed.